ಕಾಶ್ಮೀರದಲ್ಲಿ ಅಪ್ಪು ಯೋಧನ ಗೆಟಪ್ ಹಾಕಿದ್ದೇಕೆ?!

ಬೆಂಗಳೂರು, ಫೆಬ್ರವರಿ 28, 2021 (www.justkannada.in):

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಶ್ಮೀರದಲ್ಲಿ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಅಂದಹಾಗೆ ಕಾಶ್ಮೀರದಲ್ಲಿ ಪುನೀತ್ ಶೂಟಿಂಗ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.  ಯೋಧನ ಗೆಟಪ್‌ನಲ್ಲಿ  ಅಪ್ಪು ಕಾಣಿಸಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಕೆಲವು ಆಕ್ಷನ್ ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣ ಮಾಡಲು ಜೇಮ್ಸ್ ಟೀಂ ಹೋಗಿದೆ ಎನ್ನಲಾಗಿದೆ. ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಜೇಮ್ಸ್ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ತಯಾರಾಗಿರುವ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ತೆರೆಕಾಣಲಿದೆ.