Tuesday, August 18, 2026

BDA Apartments

Home Crime ಪಿಎಸ್ ಐ ನೇಮಕಾತಿ ಹಗರಣ: ಮತ್ತಿಬ್ಬರು ಆರೋಪಿಗಳ ಬಂಧನ.

ಪಿಎಸ್ ಐ ನೇಮಕಾತಿ ಹಗರಣ: ಮತ್ತಿಬ್ಬರು ಆರೋಪಿಗಳ ಬಂಧನ.

 

ಬೆಂಗಳೂರು,ಮೇ,30,2022(www.justkannada.in): ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಶಾಂತಿ ಬಾಯಿ ಹಾಗೂ ಆಕೆಯ ಪತಿ ಬಸ್ಯಾ ನಾಯಕ ಬಂಧಿಸಲಾಗಿದೆ. ಈ ದಂಪತಿ ಕಳೆದ ಒಂದುವರೆ ತಿಂಗಳಿನಿಂದ ತಲೆಮರಿಸಿಕೊಂಡಿದ್ದರು. ಹೈದರಾಬಾದ್ ನಲ್ಲಿ  ಬಲೆಗೆಈ ಇಬ್ಬರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಒಎಂಆರ್ ಶೀಟ್ ತಿದ್ದುಪಡಿ ಆರೋಪದಲ್ಲಿ ಬಂಧಿಸಲಾಗಿದೆ.

ಅಕ್ಟೋಬರ್ 30, 2021 ರಂದು ನಡೆದ ಪಿಎಸ್ಐ ಲಿಖಿತ ಪರೀಕ್ಷೆಯ ನಂತರ, ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿತ್ತು. ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಕರಣದ ತನಿಖೆಗೆ ಆದೇಶಿಸಿದರು. ಬಳಿಕ ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಡಿ ಪೊಲೀಸರು ಈವರೆಗೆ 35 ಆರೋಪಿಗಳನ್ನ ಬಂಧಿಸಿದ್ದಾರೆ.

Key words: PSI-recruitment-scam-Arrest – accused.