ಬೆಂಗಳೂರು,ಮೇ,5,2022(www.justkannada.in): 545 ಪಿಎಸ್ ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತೊಬ್ಬ ಆರೋಪಿಯನ್ನ ಬಂಧಿಸಿದೆ.
ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿ ಜಿ.ಸಿ ರಾಘವೇಂದ್ರ ಬಂಧಿತ ಆರೋಪಿ.   ಬೆಂಗಳೂರಿನಲ್ಲಿ ರಾಘವೇಂದ್ರನನ್ನ ಸಿಐಡಿ ಬಂಧಿಸಿದೆ. ರಾಘವೇಂದ್ರ  ಪಿಎಸ್ ಐ ಪರೀಕ್ಷೆಯಲ್ಲಿ 62ನೇ ರ್ಯಾಂಕ್ ಪಡೆದಿದ್ದ.  ಮೊದಲ ಪೇಪರ್ 18,  2ನೇ ಪೇಪರ್ ನಲ್ಲಿ 126 ಅಂಕ ಪಡೆದಿದ್ದನು. 
ಓಎಂಆರ್ ಶೀಟ್ ವರದಿ ಆಧರಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ವಿರುದ್ಧ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ ಈವರೆಗೆ 22 ಆರೋಪಿಗಳ ಬಂಧನವಾಗಿದೆ.
Key words: PSI-recruitment-scam-Another-accused-Arrest.
 
            