ಅ.20ರಂದು ಮೈಸೂರು ಜ್ಞಾನಬುತ್ತಿಯಲ್ಲಿ  ಪಿಎಸ್‌ಐ ಆಯ್ಕೆ ಪರೀಕ್ಷೆ ತರಬೇತಿ ಸಮಾರೋಪ ಸಮಾರಂಭ

ಮೈಸೂರು,ಅಕ್ಟೋಬರ್,18,2021(www.justkannada.in):  ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಪಿಎಸ್‌ಐ ಹಾಗೂ ಪೊಲೀಸ್ ಪೇದೆ ನೇಮಕ ತರಬೇತಿ ಪರೀಕ್ಷೆಗಳ ತರಬೇತಿ ಶಿಬಿರ ಸಮಾರೋಪ ಸಮಾರಂಭ ಅಕ್ಟೋಬರ್ 20ರ ಬುಧವಾರ ಸಂಜೆ 6ಕ್ಕೆ ಲಕ್ಷ್ಮೀಪುರಂ ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.

ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಸುಮನ್ ಪೆನ್ನೇಕರ್ ಅವರು ಪಿಎಸ್‌ಐ ಹಾಗೂ ಪೊಲೀಸ್ ಪೇದೆಗಳ ಪರೀಕ್ಷೆಯ ಅಧ್ಯಯನ ಪುಸ್ತಕ ಬಿಡುಗಡೆ ಮಾಡುವರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಲೈ ಮಹಾದೇಶ್ವರ ದೇವಸ್ಥಾನ ಆಡಳಿತ ಮಂಡಳಿ ‌ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭಯಸ್ವಾಮಿ ಶುಭ ಹಾರೈಸುವರು. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು ಎಂದು ಜ್ಞಾನಬುತ್ತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಹಾಗೂ ಕಾರ್ಯದರ್ಶಿ ಹೆಜಮಾಡಿ ಬಾಲಕೃಷ್ಣ ತಿಳಿಸಿದ್ಧಾರೆ.

ಮೈಸೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ. ಕೃಷ್ಣಯ್ಯ ವಿಶೇಷ ಅತಿಥಿಗಳಾಗಿ ಭಾಗವಹಿಸುವರು ಹಾಗೂ ಪಿಎಸ್‌ಐ ದೈಹಿಕ ಶಿಕ್ಷಣ ತರಬೇತುದಾರ ಎಂ. ಪುನಿತ್, ಡಾ. ಶಿವಪ್ರಸಾದ್, ಡಾ. ಹೊನ್ನಯ್ಯ, ಪ್ರೊ. ವಿ. ಜಯಪ್ರಕಾಶ್, ರೋಹನ್‌ ರವಿಕುಮಾರ್, ಡಾ. ಬಿ.ಟಿ. ರಘು, ಕೆ.ಆರ್. ವಿಭಾವಸು, ಡಿ.ನವೀನ್ ಪ್ರಸಾದ್, ಮುನಿರಾಜು ಭಾಗವಹಿಸುವರು.

ಜ್ಞಾನಬುತ್ತಿ ಸಂಸ್ಥೆ ಕೊರೋನಾ ಹಿಂದಿನ ಅವಧಿಯಲ್ಲಿ 170 ಪಿಎಸ್‌ಐ ಅಭ್ಯರ್ಥಿಗಳಿಗೆ 70 ದಿನಗಳ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ತರಬೇತಿ ನೀಡಿದ್ದು,  ಕೊರೋನಾ ನಂತರ ಪಿ.ಸಿ. ಮತ್ತು ಪಿಎಸ್‌ಐ ಅಭ್ಯರ್ಥಿಗಳಿಗೆ 45 ದಿನಗಳ ತರಬೇತಿ ಮುಗಿದಿದೆ ಹೇಳಿದ್ದಾರೆ.

Key words: PSI -exam- Training-Mysore  -jnanabutti-october 20th