ದಾಖಲೆ ಕೊಡ್ತೀನಿ ತನಿಖೆ ಮಾಡುವ ತಾಕತ್ತಿದೆಯಾ..? ಆ ಸಚಿವರನ್ನ ವಜಾ ಮಾಡ್ತೀರಾ..? ಮಾಜಿ ಸಿಎಂ ಹೆಚ್.ಡಿಕೆ ಸವಾಲು.

ಬೆಂಗಳೂರು,ಜುಲೈ,4,2023(www.justkannada.in): ಸಿಎಂ ಕಚೇರಿಯಲ್ಲೇ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಇದ್ದರೆ ನೀಡಲಿ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ದಾಖಲೆ ಕೊಡ್ತೀನಿ. ತನಿಖೆ ಮಾಡುವ ತಾಕತ್ ಇದೆಯಾ…? ದಾಖಲೆ ಕೊಟ್ಮೇಲೆ ಆ ಸಚಿವರನ್ನ ವಜಾ ಮಾಡ್ತೀರಾ…? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ.

ಎಲ್ಲಾ ಮಂತ್ರಿಗಳಿಗೂ ಒಂದೊಂದು ಸಾಕ್ಷ್ಯವನ್ನ ಕೊಡುತ್ತೀನಿ.  ನಾನು ಎಲ್ಲಿಗೂ ಹೆದರಿಕೊಂಡು ಹೋಗಲ್ಲ ಎಂದು ಹೆಚ್.ಡಿಕೆ ಹೇಳಿದ್ದಾರೆ.

ಸಿಎಂ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ. ಶಾಸಕರು ಶಿಫಾರಸು ಪತ್ರ ತಂದ್ರೆ 30 ಲಕ್ಷ ಹಣ ತನ್ನಿ ಅಂತಾರೆ ಎಂದು ಹೆಚ್.ಡಿಕೆ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಡಿ.ಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರು ಹೆಚ್.ಡಿಕೆ. ಬಳಿ ದಾಖಲೆ ಇದ್ದರೇ ಕೊಡಲಿ ಎಂದು ಸವಾಲು ಹಾಕಿದ್ದರು.

Key words: provide – document –investigate-Challenge- former CM -H.D.Kumaraswamy