Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ದಸಂಸದಿಂದ ಪ್ರತಿಭಟನೆ

ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ದಸಂಸದಿಂದ ಪ್ರತಿಭಟನೆ

ಮೈಸೂರು,ಅಕ್ಟೊಂಬರ್,01,2020(www.justkannada.in) :  ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.jk-logo-justkannada-logoಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಜಮಾವಣೆಗೊಂಡ ಪ್ರತಿಭಟನಕಾರರು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ತಕ್ಷಣವೇ ಅಲ್ಲಿನ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

Protest-Dasam-forcing-rapists-executed

ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಯುಪಿಯಲ್ಲಿ ದಿನನಿತ್ಯ ಅಹಿಂದ ವರ್ಗದವರ ಮೇಲೆ ಹಲ್ಲೆ, ದೌರ್ಜನ್ಯ,ಅತ್ಯಾಚಾರ, ಕೊಲೆಗಳು ಸರ್ವೇ ಸಾಮಾನ್ಯವಾಗಿದೆ. ಶಾಸಕ, ಸಂಸದರುಗಳಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮತ್ತವರ ಕುಟುಂಬದವರನ್ನು ಹಲ್ಲೆ ಮಾಡಿ ಕೊಲೆ ಮಾಡುವುದು ಯಾರ ಭಯವಿಲ್ಲದೆ ಸಾಗುತ್ತಿದೆ ಎಂದು ದೂರಿದ್ದಾರೆ.

ಶೀಘ್ರವೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಅವರ ಕುಟುಂಬದವರಿಗೆ ನೀಡಿರುವ ಎಲ್ಲಾ ರೀತಿಯ ನಾಗರಿಕ ಹಕ್ಕುಗಳನ್ನು ಹಿಂಪಡೆದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ನಿರ್ಭಯಾಳ ಪ್ರಕರಣದಂತೆ ಈ ಯುವತಿಯ ಕುಟುಂಬಕ್ಕೂ 5ಕೋಟಿ ರೂ.ಪರಿಹಾರ ನೀಡಬೇಕು. ಆಡಳಿತಾತ್ಮಕವಾಗಿ ವಿಫಲವಾಗಿರುವ ಉತ್ತರಪ್ರದೇಶ ಸರ್ಕಾರವನ್ನು ಮೂರು ವಿಭಾಗಗಳಾಗಿ ವಿಂಗಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಉಮಾ ಮಹದೇವ್, ಯಡದೊರೆ ಮಹದೇವಯ್ಯ, ಸಣ್ಣಯ್ಯ ಲಕ್ಕೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

key words : Protest-Dasam-forcing-rapists-executed