ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ-ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಫೆಬ್ರುವರಿ 2,2024(www.justkannada.in):  ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಫೆಬ್ರವರಿ 6ರಂದು ದೆಹಲಿಯಲ್ಲಿ ಪ್ರತಿಭಟನೆ  ನಡೆಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ , ಕೇಂದ್ರದ ತಾರತಮ್ಯ ನೀತಿ ವಿರೋಧಿಸಿ ಫೆಬ್ರವರಿ 7 ರಂದು ಕಾಂಗ್ರೆಸ್ ನಲ್ಲಿ ಧರಣಿ ನಡೆಸಲಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಎಲ್ಲರೂ ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಕರ್ನಾಟಕ ರಾಜ್ಯ ದೇಶದಲ್ಲೆ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಿನ್ನೆಯ ಬಜೆಟ್ ಮಾತ್ರ ಐದು ವರ್ಷದ ಬಜೆಟ್ ಗಮನಿಸಬೇಕು. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿಲ್ಲ. 2018-19 ರಲ್ಲಿ ಅನುದಾನಕ್ಕಿಂತ 40% ರಿಂದ 45% ಕಡಿಮೆ ಆಗಿದೆ. ಪ್ರತಿ ವರ್ಷ 7ಸಾವಿರ, ಎಂಟು ಸಾವಿರ ರೂ. ಕಡಿಮೆ ಆಗುತ್ತಿದೆ. ಬಜೆಟ್ ಡಬಲ್ ಆದರೂ ತೆರಿಗೆ ಪಾಲು ಹೆಚ್ಚು ಬಂದಿಲ್ಲ ಎಂದು  ಡಿಕೆ ಶಿವಕುಮಾರ್ ಹರಿಹಾಯ್ದರು.

Key words: Protest – New Delhi -February 7-DCM -DK Shivakumar