ಮೈಸೂರು,ಜುಲೈ,15,2025 (www.justkannada.in): ಮೈಸೂರಿನಲ್ಲಿ ವೈದ್ಯರೊಬ್ಬರ ವರ್ತನೆಯಿಂದ ಬೇಸತ್ತ ರೋಗಿಗಳು ವೈದ್ಯರ ವಿರುದ್ಧವೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಚಾಮರಾಜ ಜೋಡಿರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದ ರೋಗಿಗಳೇ ಪ್ರತಿಭಟನೆ ನಡೆಸಿದ್ದು, ವೈದ್ಯರನ್ನ ಬದಲಾಯಿಸಿ, ಇಲ್ಲಾಂದರೆ ಆಸ್ಪತ್ರೆ ಮುಚ್ಚಿ ಎಂದು ಆಸ್ಪತ್ರೆಗೆ ಬೀಗ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ವೈದ್ಯೆ ಡಾ.ಮಹಾಲಕ್ಷ್ಮಿ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರು ರೋಗಿಗಳ ಜೊತೆ ಸರಿಯಾಗಿ ಸ್ಪಂದಿಸಲ್ಲ. ಚಿಕಿತ್ಸೆ ನೀಡುವ ಬದಲು ರೋಗಿಗಳಿಗೆ ಬಯ್ಯುತ್ತಾರೆ. ಸೌಜನ್ಯದಿಂದ ವರ್ತಿಸದೆ ದುರಹಂಕಾರ ತೋರುತ್ತಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಸ್ಥಳಕ್ಕೆ ಡಿಎಚ್ಓ ಆಗಮಿಸುವಂತೆ ಬಿಗಿಪಟ್ಟು ಹಿಡಿದರು.
ವಿಷಯ ತಿಳಿದು ಆಸ್ಪತ್ರೆ ದೌಡಾಯಿಸಿದ ಡಿಎಚ್ ಓ ಕುಮಾರಸ್ವಾಮಿ ತಕ್ಷಣ ವೈದ್ಯರನ್ನ ಬದಲಾಯಿಸುವ ಭರವಸೆ ನೀಡಿದರು. ಆದರೂ ಪ್ರತಿಭಟನೆಗೆ ಬಂದಿದ್ದ ರೋಗಿಗಳು ಚಿಕಿತ್ಸೆ ಪಡೆಯದೆ ವಾಪಸ್ ತೆರಳಿದ್ದಾರೆ.
Key words: doctor, hospital, Patients, protest, Mysore