ಪ್ರತಿ ಟನ್ ಕಬ್ಬಿಗೆ 5500 ರೂ. ನಿಗದಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ: ಸುವರ್ಣಸೌಧ ಮುತ್ತಿಗೆಗೆ ಯತ್ನ.

ಬೆಳಗಾವಿ,ಡಿಸೆಂಬರ್,20.2022(www.justkannada.in): ಪ್ರತಿ ಟನ್ ಕಬ್ಬಿಗೆ 5500 ರೂ. ನಿಗದಿ ಹಾಗೂ ರಾಜ್ಯದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ನೂರಾರು ರೈತರು ಇಂದು ಬೆಳಗಾವಿ ಸುವರ್ಣಸೌಧಧ ಬಳಿ ಪ್ರತಿಭಟನೆ ನಡೆಸಿದರು.

ಸುವರ್ಣಸೌಧದ ಸರ್ವಿಸ್ ರಸ್ತೆ ಯಲ್ಲಿ ಮಲಗಿ ರೈತರ ಪ್ರತಿಭಟನೆ ನಡೆಸಿದ್ದು,  ಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬರಬೇಕೆಂದು ಪಟ್ಟು ಹಿಡಿದರು. ಅಲ್ಲದೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾನಿರತ ರೈತರ ಯತ್ನಿಸಿದರು.

ಈ ವೇಳೆ ಪೊಲೀಸರು ತಡೆದಿದ್ದು  ರೈತರು- ಪೊಲೀಸರ ನಡುವೆ  ಮಾತಿನ ಚಕಮಕಿ ನಡೆಯಿತು. ನಂತರ ಧರಣಿನಿರತ ರೈತರನ್ನ  ಪೊಲೀಸರು ವಶಕ್ಕೆ ಪಡೆದರು. ಬಳಿಕ ಸುವರ್ಣ ಸೌಧದ ಮುಖ್ಯದ್ವಾರದ ಬಳಿ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

Key words:  Protest – farmers –belagavi-   Suvarnasoudha