ಚಾಮುಂಡಿ ಬೆಟ್ಟದ  ಫುಟ್ಬಾತ್ ಅಂಗಡಿಗಳ ತೆರವುಗೊಳಿಸದಂತೆ ಆಗ್ರಹ: ವ್ಯಾಪಾರಿಗಳಿಂದ ಪ್ರತಿಭಟನೆ…

ಮೈಸೂರು,ಸೆ,6,2019(www.justkannada.in): ಚಾಮುಂಡಿ ಬೆಟ್ಟದ  ಫುಟ್ಬಾತ್ ಅಂಗಡಿಗಳನ್ನ ತೆರವುಗೊಳಿಸದಂತೆ ಒತ್ತಾಯಿಸಿ  ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

ಕಳೆದ ವಾರವಷ್ಟೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ  ಚಾಮುಂಡಿಬೆಟ್ಟಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ  ಪುಟ್ ಬಾತ್ ಅಂಗಡಿಗಳನ್ನ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಹೀಗಾಗಿ ನಾಳೆ  ಅಂಗಡಿಗಳನ್ನ  ತೆರವುಗೊಳಿಸುವಂತೆ ಸೂಚನೆ  ನೀಡಿರುವ ಹಿನ್ನೆಲೆ ಫುಟ್ಬಾತ್ ಅಂಗಡಿ ವ್ಯಾಪಾರಿಗಳು ಬಂದ್ ಗೆ  ಕರೆ ನೀಡಿ ಪ್ರತಿಭಟನೆ ನಡೆಸಿದ್ದಾರೆ.

ಸಚಿವರ ಸೂಚನೆಯಂತೆ  ನಾಳೆ  ಅಂಗಡಿಗಳ ತೆರವು ಮಾಡಬೇಕಿದ್ದು,  ಸ್ಥಳ ಬಿಟ್ಟು ಹೋಗದಿರಲು  ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.  ಈ ಹಿನ್ನೆಲೆ  ಅಂಗಡಿ ಮುಂಗಟ್ಟು ತೆರೆಯದೆ ಬಂದ್ ಮಾಡಲಾಗಿದ್ದು,  ವ್ಯಾಪಾರಸ್ತರಿಲ್ಲದೆ ಚಾಮುಂಡಿಬೆಟ್ಟದ ವಾತಾವರಣ ಬಣಗುಡುತ್ತಿದೆ.

Key words: Protest- demanding- mysore- Chamundi hill –footbath- shops