ಬೆಂಗಳೂರು,ನವೆಂಬರ್,4,2025 (www.justkannada.in): ಕಬ್ಬಿಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಕಬ್ಬಿಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣ ಬಂದ್ ಮಾಡಲಾಗಿದ್ದು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ದಾರೆ. ಚಿಕ್ಕೋಡಿ, ಹುಕ್ಕೇರಿಯಲ್ಲೂ ಹೋರಾಟ ಬೆಂಬಲಿಸಿ ಬಂದ್ ಮಾಡಲಾಗಿದೆ.
ವಿಜಯಪುರ-ಸಂಕೇಶ್ವರ, ಜತ್ತ- ಜಾಂಬೋಟಿ ಹಾಗೂ ಗೋಕಾಕ್ -ಅಥಣಿ ರಸ್ತೆಗಳನ್ನ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರ ಹೋರಾಟಕ್ಕ ಕನ್ನಡ ಪರ ವಿವಿಧ ಸಂಘಟನೆಗಳು ಸಾಥ್ ನೀಡಿವೆ. ಅಥಣಿ ಪಟ್ಟಣದಲ್ಲಿ ಪ್ರಮುಖ ಶಾಲಾ- ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
Key words: Protest, bandh, demanding, sugarcane price, fixing







