ವಿಧಾನಸಭೆಯಲ್ಲಿ ಮೈಸೂರು ಜಿಲ್ಲೆ ಅಭಿವೃದ್ದಿಯ ಬಗ್ಗೆ ಪ್ರಸ್ತಾಪ: ಸಮರ್ಪಕ ಅನುದಾನಕ್ಕೆ ಮನವಿ- ಶಾಸಕ ಟಿ. ಎಸ್. ಶ್ರೀವತ್ಸ.

ಬೆಂಗಳೂರು,ಜುಲೈ,18,2023(www.justkannada.in): ವಿಧಾನಸಭೆಯ ಕಲಾಪದಲ್ಲಿ ಚರ್ಚೆ ವೇಳೆ  ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ  ಟಿ. ಎಸ್. ಶ್ರೀವತ್ಸ ಅವರು,  ಮೈಸೂರು ಮಹಾನಗರ ಹಾಗೂ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಸಿದ್ದರಾಮಯ್ಯ ಅವರ ನೇತೃತ್ವದ ಬಜೆಟ್ ನಲ್ಲಿ ಘೋಷಣೆ ಆಗಿರುವ ಕೆಲವು ಯೋಜನೆಗಳು ಮತ್ತು ಕಳೆದ ಬೊಮ್ಮಾಯಿ  ಅವರ  ಸರ್ಕಾರದ ಅವಧಿಯಲ್ಲಿನ ಬಜೆಟ್ ನ ಕೆಲವು ಘೋಷಣೆಗಳ ಪೂರಕವಾಗಿ ಸಮರ್ಪಕವಾಗಿ ಅನುದಾನವನ್ನು ವಿತರಿಸಲು ಹಾಗೂ ಶೀಘ್ರದಲ್ಲೇ ಕೆಲಸ ನಡೆಸುವ ಬಗ್ಗೆ ಸದನದಲ್ಲಿ ವಿಚಾರವನ್ನು ಮಂಡಿಸಿದರು.

ನಂತರ ಮಾತನಾಡಿದ ಶಾಸಕ  ಶ್ರೀವತ್ಸ,  ಮೈಸೂರು ಜಿಲ್ಲೆಯವರೇ ಹಾಗೂ ಹಿಂದುಳಿದ ವರ್ಗದ ಎರಡನೇ ನಾಯಕರಾದಂತಹ ಸಿದ್ದರಾಮಯ್ಯ ಅವರು ತಮ್ಮ ಸ್ವಂತ ತವರು ಜಿಲ್ಲೆಗೆ ಕೊಟ್ಟಿರುವ  ಬಜೆಟಿನ ಘೋಷಣೆಯಲ್ಲಿ ಹೆಚ್ಚಿನ ಹಣಕಾಸನ್ನು ಮೀಸಲಿಡಬೇಕೆಂದು ಕೇಳಲಾಯಿತು, ದೊಡ್ಡ ಆಸ್ಪತ್ರೆ ಎಂದು ಹೆಸರುವಾಸಿಯಾಗಿರುವ ಕೃಷ್ಣರಾಜ ಆಸ್ಪತ್ರೆ ಮುಂದಿನ ವರ್ಷಕ್ಕೆ 100 ವರ್ಷಗಳು ತುಂಬುತಿದೆ.  ಈ ಕಟ್ಟಡಕ್ಕೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ   ಅಭಿವೃದ್ಧಿಯನ್ನು ಮಾಡಲು ಸಹಕಾರಿಯಾಗಿ  ಕರ್ನಾಟಕ ರಾಜ್ಯದಲ್ಲೇ ಮಾದರಿ ಆಸ್ಪತ್ರೆಯಾಗಿ ಮಾಡಬೇಕು ಕೇಳಲಾಯಿತು ಎಂದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ  ಚಿತ್ರನಗರಿ ಸ್ಥಾಪಿಸಲು ಅನುಮೋದನೆಯಾಗಿದ್ದು  ಈ ಕಾರ್ಯ ಚಟುವಟಿಕೆಗಳು ಹಾಗೂ ಇದಕ್ಕೂ ಕೂಡ ಹೆಚ್ಚಿನ ಅನುದಾನವನ್ನು ನೀಡಿ ಮೈಸೂರು ಜಿಲ್ಲೆಯನ್ನು ಇನ್ನು ಹೆಚ್ಚಿನ ಪ್ರವಾಸೋದ್ಯಮ ಮಾಡುವ ನಿಟ್ಟಿನಲ್ಲಿ  ಕೋರಿದ್ದೇನೆ ಎಂದು ಶಾಸಕ ಶ್ರಿವತ್ಸ ತಿಳಿಸಿದರು.

ಮೈಸೂರು ಇತಿಹಾಸ ಪ್ರಸಿದ್ಧವಾಗಿದ್ದು  ದೇಶ ವಿದೇಶಗಳ ಸಂಪರ್ಕವು  ವಿಮಾನದ ಮೂಲಕ ನಡೆಸುವ ನಿಟ್ಟಿನಿಂದ. ಕೇಂದ್ರ ಸರ್ಕಾರ ಹಾಗೂ ಹಿಂದಿನ  ರಾಜ್ಯ ಸರ್ಕಾರ ಇದರ ರನ್ ವೇ ಗಾಗಿ 175 ಕೋಟಿ ಘೋಷಣೆ ಮಾಡಿತ್ತು. ಅದರೆ ಆ ವಿಷಯದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಸರ್ಕಾರದ ಯೋಜನೆ ನೆನಗುದಿಗೆ ಬಿಳಬಹುದಾ ಎಂಬ ಆತಂಕ .ಹೀಗಾಗಿ ಕೂಡಲೇ  ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕೆಂದು  ಮನವಿ ಮಾಡಲಾಗಿದೆ ಎಂದು ಶ್ರೀವತ್ಸ ಮಾಹಿತಿ ನೀಡಿದರು.

ಮೈಸೂರು ಸಾಂಸ್ಕೃತಿಕ ನಗರಿ ಅದರಲ್ಲೂ ಹೆಚ್ಚು ಹೆರಿಟೇಜ್ ಸಿಟಿ ಯಲ್ಲಿ ಇತಿಹಾಸ ಬಿಲ್ಡಿಂಗ್ ಗಳಾದ ಲ್ಯಾನ್ಸ ಡೌನ್, ದೇವರಾಜ ಮಾರುಕಟ್ಟೆ, ವಾಣಿವಿಲಾಸ್ ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆಯ ಬಗ್ಗೆ ಹೆಚ್ಚು ಗಮನ ತರಲಾಯಿತು

ಕರ್ನಾಟಕ ವಸ್ತು ಪ್ರದರ್ಶನವನ್ನು ರಾಜ್ಯ ಸರ್ಕಾರ ಪ್ರಗತಿ ಮೈದಾನ ಎಂದು ಘೊಷಿಸಿದೆ ಆದರೆ ಇದಕ್ಕೆ ಯಾವುದೇ ರೀತಿಯ ಅನುದಾನ ದ ಬಗ್ಗೆ ಘೋಷಣೆ ಆಗಿಲ್ಲ ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ಕೊಡಬೇಕು ಎಂದು ಕೋರಲಾಗಿದೆ ಎಂದು ಶಾಸಕ ಶ್ರೀವತ್ಸ ತಿಳಿಸಿದರು.

ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದು ಹೆಮ್ಮೆಯ ಸಂಗತಿ ಆದರೆ ರಾಜ್ಯದ ಜನರು ಮೈಸೂರಿನ ಜನತೆಯ ಒತ್ತಾಯ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಇದರ ಬಗ್ಗೆ ಬಜೆಟ್ ನಲ್ಲಿ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲದು ನನಗೆ ಬೇಸರ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಮೈಸೂರು ಜಿಲ್ಲೆಯಲ್ಲಿ ಖಾಸಗಿ ಇಂಜಿನಿಯರ್ ಕಾಲೇಜುಗಳು ಹೆಚ್ಚು ಇದ್ದು ಬಡ ಹಾಗೂ ಮಧ್ಯಮ ವರ್ಗದ ಜನರ ಕಷ್ಟ ಹೆಚ್ಚಾಗಿದೆ.  ಅತಿಹೆಚ್ಚು ಡೊನೇಷನ್ ಕೊಟ್ಟು ವಿದ್ಯಾಭ್ಯಾಸ ಮಾಡುವುದು ಕಷ್ಟವಾಗಿದ್ದು ಸರ್ಕಾರ ಮುಂದಿನ ಮುಂಗಡ ಬಜೆಟ್ ನಲ್ಲಿ ಮೈಸೂರು ಜೆಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್  ಘೋಷಣೆ ಮಾಡಬೇಕೇಂದು  ಕೋರಿದ್ದೇನೆ ಎಂದು ಶಾಸಕ ಶ್ರೀ ವತ್ಸ ತಿಳಿಸಿದರು.

Key words: Proposal – development – Mysore -district – assembly- MLA -T. S. Srivatsa.