“ಆಸ್ತಿ ತೆರಿಗೆ ಹೆಚ್ಚಳ, ಜನತೆ ಈಗಲಾದರೂ ಎಚ್ಚೆತ್ತು  ಸರ್ಕಾರವನ್ನು ಪ್ರಶ್ನಿಸಬೇಕು” : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಮೈಸೂರು,ಜನವರಿ,19,2021(www.justkannada.in) : ಆಸ್ತಿ ತೆರಿಗೆ ಹೊಸ ತಿದ್ದುಪಡಿ ಪ್ರಕಾರ ಖಾಲಿ ಇರುವ ನಿವೇಶನಗಳಿಗೂ ಪೂರ್ಣ ಪ್ರಮಾಣದ ತೆರಿಗೆ ಕಟ್ಟಬೇಕಾಗುತ್ತದೆ. ರಾಜ್ಯದ ಜನತೆ ಈಗಲಾದರೂ ಎಚ್ಚೆತ್ತು  ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಆಸ್ತಿ ತೆರಿಗೆ ಹೆಚ್ಚಳದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶವ್ಯಕ್ತಪಡಿಸಿದರು.jkನಗರದ  ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ರಾಜ್ಯದ ೮ ಮಹಾನಗರ ಪಾಲಿಕೆಗಳ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದರು. Property,tax,hike,People,still,awake,government,should,challenged,KPCC,spokesperson,M.Laxmanಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಯನ್ನು ಕ್ರಮವಾಗಿ ಶೇ. ೦.೩ ರಿಂದ  ಶೇ.೧ ಕ್ಕೆ, ಶೇ ೦.೫ ರಿಂದ ಶೇ ೧.೫ ರಷ್ಟು ಹೆಚ್ಚಿಸಿದೆ. ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ ೪೦ ಪೈಸೆ ಏರಿಕೆ ಮಾಡಿ ಒಂದೂವರೆ ತಿಂಗಳು ಕೂಡ ಆಗಿಲ್ಲ. ಇದೀಗ ಏಕಾಏಕಿ ಆಸ್ತಿ ತೆರಿಗೆಯನ್ನ ಹೆಚ್ಚಳ ಮಾಡಿದೆ ಎಂದು ದೂರಿದರು.

key words : Property-tax-hike-People-still-awake-government-should-challenged-KPCC-spokesperson-M.Laxman