ಕಳುವು ಪ್ರಕರಣ: ಕೋಟ್ಯಾಂತರ  ರೂ. ಮೌಲ್ಯದ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು

ಮೈಸೂರು,ಮೇ,6,2025 (www.justkannada.in): ನಗರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳುವು ಪ್ರಕರಣಗಳು ಭೇದಿಸಿದ ಪೊಲೀಸರು ವಶಪಡಿಸಿಕೊಂಡ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸಿದರು.

ಕಳ್ಳತನ ಪ್ರಕರಣಗಳಲ್ಲಿ ಅಮಾನತು ಪಡಿಸಿಕೊಂಡ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಮೈಸೂರು ನಗರ ಪೋಲಿಸರು ಆಯೋಜನೆ ಮಾಡಿದ್ದರು. ಕಳೆದ 8 ತಿಂಗಳ ಅವಧಿಯಲ್ಲಿ ನಡೆದಿದ್ದ ಕಳುವು ಪ್ರಕರಣಗಳ ಪ್ರಾಪರ್ಟಿ ರಿಟರ್ನ್ ಪರೇಡ್ ನಡೆಸಲಾಗಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲುಗಳನ್ನು ವಾರಸುದಾರಿಗೆ ಹಿಂದಿರುಗಿಸಲಾಯಿತು.

2  ದರೋಡೆ, 4 ಸುಲಿಗೆ, ಸರಗಳ್ಳತನ ಪ್ರಕರಣ 21, ಕಳ್ಳತನ 34,  ಮನೆಗಳ್ಳತನ 6, ವಾಹನ ಕಳುವು 69 ಪ್ರಕರಣಗಳನ್ನ  ಭೇದಿಸಿದ ಪೊಲೀಸರು 20 ಆರೋಪಿಗಳ ದಸ್ತಗಿರಿ ಮಾಡಿ,  ಒಟ್ಟು 4,23,60,000 ಮೌಲ್ಯದ 5 ಕೆ.ಜಿ 320 ಗ್ರಾಂ ಚಿನ್ನಾಭರಣ, 6 ಕೆ.ಜಿ 246 ಗ್ರಾಂ ಬೆಳ್ಳಿ ಪದಾರ್ಥಗಳು, 52 ದ್ವಿಚಕ್ರವಾಹನಗಳು, 9 ಕಾರುಗಳು, 8 ಗೂಡ್ಸ್ ವಾಹನಗಳು ಸೇರಿದಂತೆ 13,54,500 ರೂ ನಗದು ವಶಪಡಿಸಿಕೊಂಡಿದ್ದರು. ದಸ್ತಗಿರಿ ಮಾಡಿರುವ 20 ಕಳ್ಳರಲ್ಲಿ ಇಬ್ಬರು ಅಂತರ ರಾಜ್ಯ ಕಳ್ಳರಾಗಿದ್ದಾರೆ ಎಂದು  ಸುದ್ದಿ ಗೋಷ್ಠಿ ಮೂಲಕ ಮೈಸೂರು ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ಹಂಚಿಕೊಂಡರು.

ವಾರಸುದಾರರಿಗೆ ತಮ್ಮ ತಮ್ಮ ಸ್ವತ್ತುಗಳನ್ನ ಹಿಂದಿರುಗಿಸಲಾಗಿದ್ದು, ನಗರದ ವಿವಿಧ ಪೋಲಿಸ್ ಠಾಣಾ ಅಧಿಕಾರಿಗಳ ಕಾರ್ಯಕ್ಕೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Key words:  theft Case, Mysore police, Property return parade