ಯುನೈಟೆಡ್ ಕಿಂಗ್ಡಮ್‌ ನ ಡಂಡೀ ವಿ.ವಿ.ಗೆ ರಾಜ್ಯದ  ಮೂರು ವಿ.ವಿ.ಗಳ ವಿದ್ಯಾರ್ಥಿಗಳು- ಸಚಿವ ಅಶ್ವತ್ ನಾರಾಯಣ್.

ಬೆಂಗಳೂರು,ಫೆಬ್ರವರಿ,23,2023(www.justkannada.in):  ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ  ಬೆಳೆಸಬೇಕೆಂಬ ಎನ್‌ ಇಪಿ ಗುರಿಗೆ ಪೂರಕವಾಗಿ ಯುನೈಟೆಡ್‌ ಕಿಂಗ್‌ ಡಂನ ಡಂಡೀ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ನಡೆಸಲು ಆಯ್ಕೆಯಾಗಿರುವ ರಾಜ್ಯದ  3 ವಿ.ವಿ.ಗಳ ಆಯ್ದ ಪ್ರತಿಭಾವಂತ 15 ವಿದ್ಯಾರ್ಥಿಗಳ ತಂಡವನ್ನು ಅಲ್ಲಿಗೆ ಕಳಿಸಿಕೊಡುವ ಕಾರ್ಯಕ್ರಮ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆಯಿತು.

ಈ ಮೂಲಕ  ‘ಜನಜೀವನದಲ್ಲಿ ಪರಿವರ್ತನೆ: ಕರ್ನಾಟಕ, ಡಂಡೀ & ಬಿಯಾಂಡ್‌’ ಉಪಕ್ರಮಕ್ಕೆ ಅವರು ಚಾಲನೆ ನೀಡಿದರು. ಈ ಯೋಜನೆಯಡಿ ರಾಜ್ಯದ ಗುಲ್ಬರ್ಗ, ಯುವಿಸಿಇ ಮತ್ತು ಬೆಂಗಳೂರು ಕೃಷಿ ವಿ.ವಿ.ಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ‍್ವಥ್ ನಾರಾಯಣ್ ಅವರು, “ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು. ಗುಲ್ಬರ್ಗ ವಿವಿ ತಂಡವು ಕಲಬುರಗಿ ಭಾಗದ ಬುಡಕಟ್ಟು ಜನರಲ್ಲಿ ಇರುವ ಆಂಟಿಮೈಕ್ರೋಬಯಲ್‌ ನಿರೋಧಕ ಶಕ್ತಿ ಕುರಿತು, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಡೀಸೆಲ್‌ ಬದಲು ಪ್ಲಾಸ್ಟಿಕ್‌ ತೈಲ ಮತ್ತು ಬಳಸಲ್ಪಟ್ಟಿರುವ ಖಾದ್ಯ ತೈಲವನ್ನು ಪರ್ಯಾಯ ಇಂಧನವಾಗಿ ಬಳಸುವ ಸಾಧ್ಯತೆ ಮತ್ತು ಬೆಂಗಳೂರು ಕೃಷಿ ವಿ.ವಿ.ಯು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೋಲಾರ್‍‌ ಸೆನ್ಸಾರ್‍‌ ಆಧಾರಿತ ನೀರಾವರಿ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ಸಂಶೋಧನೆ ನಡೆಸಲಿವೆ” ಎಂದರು.

ಇದರ ಪ್ರಕಾರ, ಈ ಮೂರೂ ವಿ.ವಿ.ಗಳ ತಂಡಗಳು ಡಂಡೀ ವಿ.ವಿ. ನಡೆಸಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಇದು ನಮ್ಮ ವಿದ್ಯಾರ್ಥಿಗಳ ಜಾಣ್ಮೆ, ನಾವೀನ್ಯತೆಯ ಕೌಶಲ್ಯಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಮಾರ್ಚ್‌ನಿಂದ ಜೂನ್‌ ವರೆಗೆ ನಾಲ್ಕು ತಿಂಗಳು ಈ ಯೋಜನೆಗಳು ಚಾಲ್ತಿಯಲ್ಲಿ ಇರಲಿದ್ದು, ನಂತರ ಈ ತಂಡಗಳು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿವೆ. ಇದಕ್ಕೆ ಆಗುವ ವೆಚ್ಚವನ್ನು ಬ್ರಿಟಿಷ್‌ ಕೌನ್ಸಿಲ್‌, ಡಂಡೀ ವಿವಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತುಗಳು ಭಾಗಶಃ ಭರಿಸಲಿವೆ ಎಂದು ಅವರು ತಿಳಿಸಿದರು.

ಸ್ಪರ್ಧೆಯಲ್ಲಿ ವಿಜೇತವಾಗುವ ತಂಡಕ್ಕೆ ಗರಿಷ್ಠ 6 ಸಾವಿರ ಪೌಂಡ್‌ ಶಿಷ್ಯವೇತನ ಸಿಗಲಿದ್ದು, ಒಂದು ವರ್ಷದ ಅವಧಿಯ ಸ್ನಾತಕೋತ್ತರ ಕೋರ್ಸಿಗೆ ಅಲ್ಲೇ ಪ್ರವೇಶಾತಿ ಪಡೆಯಬಹುದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತರುತ್ತಿರುವ ಗುಣಾತ್ಮಕ ಬದಲಾವಣೆಗೆ ಇದು ನಿದರ್ಶನವಾಗಿದೆ ಎಂದು ಅಶ್ವತ್ ನಾರಾಯಣ್ ನುಡಿದರು.

ರಾಜ್ಯದ ಶೈಕ್ಷಣಿಕ ಸುಧಾರಣೆಗೆ ಬ್ರಿಟಿಷ್‌ ಕೌನ್ಸಿಲ್‌ ಕಳೆದ ಒಂದು ದಶಕದಿಂದಲೂ ಕೈ ಜೋಡಿಸಿದೆ. ರಾಜ್ಯ ಸರಕಾರವು ಕೂಡ ಈ ಕ್ಷೇತ್ರದಲ್ಲಿ ದೀರ್ಘಾವಧಿ ಪರಿಣಾಮ ಉಂಟುಮಾಡುವಂತಹ ಉಪಕ್ರಮಗಳನ್ನು ಕೈಗೊಂಡಿದೆ. ನಮ್ಮ ಯುವಜನರು ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸುವಂತೆ ಈ ಮೂಲಕ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬ್ರಿಟಿಷ್‌ ಕೌನ್ಸಿಲ್‌ ನ ದಕ್ಷಿಣ ಭಾರತ ನಿರ್ದೇಶಕ ಜನಕ ಪುಷ್ಪನಾಥನ್‌ ಮಾತನಾಡಿ, “ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಬೋಧಕರಿಗೆ ಹೊಸಹೊಸ ಕೌಶಲ್ಯಗಳು, ಸಂಪನ್ಮೂಲಗಳು ಮತ್ತು ವೈಧಾನಿಕತೆಗಳನ್ನು ಕಲಿಸುವುದು ಈ ಒಡಂಬಡಿಕೆಯ ಗುರಿಯಾಗಿದೆ. ಇದು ರಾಜ್ಯದ ಶೈಕ್ಷಣಿಕ ಮಹತ್ತ್ವಾಕಾಂಕ್ಷೆ ಮತ್ತು ಆರ್ಥಿಕ ಬೆಳವಣಿಗೆಗೆ ಇಂದು ಕೊಡಲಿದೆ. ಇದರಿಂದ ಯುವಜನರಿಗೆ ಭಾರೀ ಲಾಭವಾಗಲಿದೆ” ಎಂದರು.

ಕಾರ್ಯಕ್ರಮದಲ್ಲಿ ಡಂಡೀ ವಿ.ವಿ.ದ ಉನ್ನತಾಧಿಕಾರಿಗಳಾದ ಪ್ರೊ.ಹರಿ ಹುಂಡಾಲ್‌, ಪ್ರಿ.ಡೈಸ್‌ ಡೇವಿಡ್‌ಸನ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ, ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ್‍‌, ಕೃಷಿ ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ, ಯುವಿಸಿಇ ಪ್ರಭಾರಿ ಪ್ರಿನ್ಸಿಪಾಲ್‌ ಪ್ರೊ.ದೀಪಾ ಶೆಣೈ ಉಪಸ್ಥಿತರಿದ್ದರು.

Key words: Promotes- students – Dundee university-United Kingdom – Minister -Ashwath Narayan

ENGLISH SUMMARY…

Promotes students to deliver real time solutions

Karnataka- UoD launch research oriented project

Bengaluru: In a bid to spur competency among students to deliver real time solutions to practical issues, the Department of Higher Education launched a project on Thursday, in collaboration with the University of Dundee (UoD, Scotland, UK). This collaborative project is claimed as an outcome of implementation of NEP-2020.

The research oriented project “Transforming Lives: Karnataka, Dundee & Beyond” was launched by Dr. CN Ashwath Narayan, Minister for Higher Education.

This is a student competition project
envisioned jointly by Karnataka State Higher Education Council (KSHEC) and University of Dundee, one of the world’s leading research Universities and has been supported by the British Council.

In this context three Karnataka HEIs, namely Gulbarga University, University of Visvesvaraya College
of Engineering and University of Agricultural Sciences, Bangalore, have been selected to participate
in University of Dundee Competition.

Speaking on the occasion, Minister Narayan said, the project will provide higher education students in Karnataka an opportunity to pit their wits, intelligence, and innovative skills in the competitions which align closely with the research areas. It also facilitates developing
institutional links between the UoD and HEIs in Karnataka, he added.

Janaka Pushpanathan, Director (South India), British Council said, “Under the project, students will work on real-world problems co-mentored byexperts from Dundee & Karnataka University. Students will also get an opportunity to experience Technical know-how in University of Dundee.”

Each participating HEI will identify research- based projects and assemble an interdisciplinary
team of 4 or 5 students and a host supervisor from an academic background. The duration of the project
will be 4 months (March- June) where the students will be trained together by Karnataka HEIs and
University of Dundee.
After 4 months all the three teams will be hosted at University of Dundee for One week. The UoD will provide arrangements for accommodation on the University campus.

The winning team will get the opportunity for scholarships of up to £6,000 to enrol in a 12-month PG course at the UoD (eligible for September 2023 entry) and partial financial support will be extended to the participating teams by British Council,
UoD and KSHEC.

Students team along with one mentor each from three participating universities were present at the event.

Prof. Hari Hundal, Prof. Dyce Davidson, Grant Smith, (UoD), Prof. Dayanand Agsar, VC, Gulbarga University, Dr. S. V. Suresha, VC, University of Agricultural Sciences, G.K.V.K., Bengaluru, Prof. Deepa Shanai, Principal (In-charge), University Visvesvaraya College of Engineering, Prof B.Thimme Gowda, Vice-Chairperson, and Dr.Gopalakrishna Joshi, ED, KSHEC attended.