ಬೆಂಗಳೂರು,ಸೆಪ್ಟಂಬರ್,8,2025 (www.justkannada.in): ಬೆಂಗಳೂರು ಕೇಂದ್ರ ವಿಶ್ವ ವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ರಮೇಶ್ ಅವರನ್ನ ನೇಮಕ ಮಾಡಿ ಆದೇಶಿಸಲಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆದೇಶನುಸಾರ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಬಿ.ಎಸ್ ಪ್ರಶಾಂತ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ. ಲಿಂಗರಾಜು ಗಾಂಧಿ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಹಂಗಾಮಿ ಕುಲಪತಿಯಾಗಿ ವಾಣಿಜ್ಯ ವಿಭಾಗದ ಹಿರಿಯ ಡೀನ್ ಆಗಿದ್ದ ಡಾ. ಕೆ.ಆರ್ ಜಲಜಾ ಅವರು ನೇಮಕವಾಗಿದ್ದರು.
ನಂತರ ಕೆಎಸ್ ಒಯುವಿನ ವಿಶ್ರಾಂತ ಕುಲಪತಿ ಪ್ರೊ. ಶಿವಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಸರ್ಚ್ ಕಮಿಟಿಯನ್ನ ರಚಿಸಲಾಗಿತ್ತು. ಸರ್ಚ್ ಕಮಿಟಿ ಮಾಡಿದ ಶಿಫಾರಸ್ಸು ಅನ್ವಯ ಇದೀಗ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ರಮೇಶ್ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಪ್ರೊ.ರಮೇಶ್ ಅವರ ಅನುಭವ..
ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಪ್ರೊ. ರಮೇಶ್ ಬಿ ಅವರು ಸೇವೆ ಸಲ್ಲಿಸಿದ್ದಾರೆ. ಕುಲಸಚಿವ(ಆಡಳಿತ)ರಾಗಿ ಒಂದು ವರ್ಷ 5 ತಿಂಗಳು, ಕುಲಸಚಿವ( ಮೌಲ್ಯಮಾಪನ)ರಾಗಿ 2 ವರ್ಷ 1ತಿಂಗಳು, ಹಣಕಾಸು ಅಧಿಕಾರಿಯಾಗಿ 2 ತಿಂಗಳು ಹಾಗೂ ನಿರ್ದೇಶಕ ಹುದ್ದೆ , ಬೆಂಗಳೂರು ಕೇಂದ್ರ ವಿಶ್ವ ವಿದ್ಯಾನಿಲಯದ ಚೇರ್ಮನ್, ಹೀಗೆ ಹಲವು ಹುದ್ದೆಗಳಿಗೆ ನೇಮಕಕೊಂಡು ರಮೇಶ್ ಅನುಭವ ಪಡೆದಿದ್ದಾರೆ. ಇದೀಗ ಕುಲಪತಿಯಾಗಿ ನೇಮಕಗೊಂಡಿದ್ದಾರೆ.
Key words: Prof. Ramesh, appointed, new VC, BCU