“ಪ್ರೊ.ಕೆ.ಎಸ್ ಭಗವಾನ್ ಮುಖಕ್ಕೆ ಮಸಿ ಪ್ರಕರಣ ಖಂಡಿಸಿ ದಸಂಸದಿಂದ ಪ್ರತಿಭಟನೆ”

ಮೈಸೂರು,ಜನವರಿ,06,2021(www.justkannada.in) : ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳೆದ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.jkನಗರದ ಡಿಸಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು, ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದು ಅವರ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಭಿನ್ನಾಭಿಪ್ರಾಯವನ್ನು ಚರ್ಚೆ ಅಥವಾ ನ್ಯಾಯಾಲಯದ ಮುಖಾಂತರ ಬಗೆಹರಿಸಬೇಕು. ಹಿರಿಯ ಸಾಹಿತಿಗೆ ಈ ರೀತಿ ಮಾಡುವುದು ಸರಿಯಲ್ಲ. ಒಬ್ಬ ಮಹಿಳಾ ವಕೀಲೆ ನ್ಯಾಯದ ಗೌರವನ್ನು ಎತ್ತಿ ಹಿಡಿಯಬೇಕೆ ಹೊರತು ಈ ರೀತಿ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದರು.Prof.K.S.Bhagwan,face,ink,Case,Condemnation,Dissenting,protest

ಮೀರಾ ರಾಘವೇಂದ್ರರನ್ನು ಈ ಕೂಡಲೇ ಬಾರ್ ಕೌನ್ಸಿಲ್ ನಿಂದ ವಜಾಗೊಳಿಸಬೇಕು. ಅವರ ವಿರುದ್ಧ ಪ್ರಕರಣ ದಾಖಲಾಗಬೇಕೆಂದು ಆಗ್ರಹಿಸಿದರು.

key words : Prof.K.S.Bhagwan-face-ink-Case-Condemnation-Dissenting-protest