ಪೋಡಿ ಮುಕ್ತ ತಾಲ್ಲೂಕಿಗೆ ಕ್ರಮವಹಿಸಿ- ಸಚಿವ  ಡಾ. ನಾರಾಯಣಗೌಡ…

ಮಂಡ್ಯ.ಫೆಬ್ರವರಿ 17,2021(www.justkannada.in):  ಕೆ.ಆರ್ ಪೇಟೆ ತಾಲ್ಲೂಕನ್ನು ಪೋಡಿ ಮುಕ್ತ ತಾಲ್ಲೂಕು ಮಾಡಲು ಶ್ರಮವಹಿಸುವೆ.  ಈ ಸಂಬಂಧ ಎಲ್ಲಾ ಅಧಿಕಾರಿಗಳು ಕ್ರಮವಹಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣಗೌಡ ಅವರು ಹೇಳಿದರು.jk

ಕೆ.ಆರ್ ಪೇಟೆಯ ಅಕ್ಕಿಹೆಬ್ಬಾಳಿನಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ, ಹಿಂದುಳಿದ ತಾಲ್ಲೂಕನ್ನು ಮುಂದೆ ತರಲು ನೂತನ ಜಿಲ್ಲಾಧಿಕಾರಿಗಳು ಸಹಕರಿಸಿ. ಕೆ.ಆರ್ ಪೇಟೆ ಮಳೆ ಆಶ್ರಿತ ಪ್ರದೇಶ ಈಗಾಗಿ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳು ಕ್ಷೀಪ್ರಗತಿಯಲ್ಲಿ ಸಾಗಲಿ. ಕೆ.ಆರ್ ಪೇಟೆಯಲ್ಲಿ ವಾರ್ ರೂಂ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ದಿನಗಳಲ್ಲಿ ಕ್ರಮವಹಿಸಿಲಾಗುವುದು. ಇದೇ ತಿಂಗಳ 20 ರಂದು ಜಿಲ್ಲಾಧಿಕಾರಿಗಳು ಗ್ರಾಮವಾಸ್ತವ್ಯವನ್ನು ಕೈಗೊಂಡು ನಿಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದರು‌.

ಜಿಲ್ಲಾಧಿಕಾರಿಗಳಾದ ಎಸ್ ಅಶ್ವಥಿ  ಮಾತನಾಡಿ, ಕೆ.ಆರ್ ಪೇಟೆಯಲ್ಲಿ ಈಗಾಗಲೇ ಎರಡು ಜನಸಂಪರ್ಕ ಮಾಡಿದ್ದು ಎರಡು ಕಾರ್ಯಕ್ರಮಗಳು ಯಶಸ್ವಿಯಾಗಿದ್ದು,ಈ ದಿನ ಅಕ್ಕಿಹೆಬ್ಬಾಳಿನಲ್ಲಿ ಆಯೋಜಿಸಿರುವ ಜನಸಂಪರ್ಕ ಕಾರ್ಯಕ್ರಮವು ಕೂಡ ಯಶಸ್ವಿಯಾಗಲಿದೆ ಎಂದರು.

ಜನರ ಸಮಸ್ಯೆಗಳನ್ನು ಸ್ಪಂದಿಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದು, ಅರ್ಹ ಫಲಾನುಭವಿಗಳಿಗೆ ಸದುಪಯೋಗವಾಗಲಿದೆ ಎಂದು ಹೇಳಿದರು. ಈಗಾಗಲೇ ಅರ್ಹ ಫಲಾನುಭವಿಗಳನ್ನ ಕಂದಾಯ ಇಲಾಖೆಯವರು ಗುರುತಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ವಿಧವಾವೇತನ, ವಿಶೇಷಚೇತನರ ವೇತನ ಮಂಜೂರಾತಿ ಆದೇಶಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಹೆಣ್ಣುಮಕ್ಕಳಿಗೆ ಭಾಗ್ಯ ಲಕ್ಷ್ಮಿ ಬಾಂಡ್ ನ್ನು ವಿತರಿಸಲಾಯಿತು. ರಾಷ್ಟ್ರೀಯ ಮಹಿಳಾ ಕಾಯಕೋತ್ಸವದ ನೂತನ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಿಡುಗಡೆಗೊಳಿಸಲಾಯಿತು. 4 ಜನ ವಿಶೇಷಚೇತನರಿಗೆ ವಿಲ್ ಛೇರ್ ನ್ನು ವಿತರಿಸಲಾಯಿತು.proceed-podi-free-taluk-kr-pet-minister-narayana-gowda

ರಾಜ್ಯ ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ  ವಾಲಿಬಾಲ್ ನಲ್ಲಿ ಹೆಸರುಗಳಿಸಿರುವ ಕೆ.ಆರ್ ಪೇಟೆ ತಾಲ್ಲೂಕಿನ ಪವಿತ್ರರವರಿಗೆ ಯುವಜನ,ಕ್ರೀಡಾ ಇಲಾಖೆವತಿಯಿಂದ ಸನ್ಮಾನಿಸಲಾಯಿತು. ಪ್ರಧಾನ ಮಂತ್ರಿ ಮತ್ಸ್ಯ ಯೋಜನೆಯಲ್ಲಿ ಶಾಖ ನಿರೋಧಕ ಯಂತ್ರವನ್ನು ನೀಡಲಾಯಿತು.

ಅರ್ಹ ಫಲಾನುಭವಿಗಳಿಗೆ ಇಂದಿರಾ ಗಾಂಧಿ ವೃದ್ದಾಪ್ಯ ವೇತನವನ್ನು ವಿತರಿಸಲಾಯಿತು. ಅರ್ಹ ಫಲಾನುಭವಿಗೆ ಮಿನಿಟ್ಯಾಕ್ಟರ್ ನ್ನು ವಿತರಿಸಲಾಯಿತು.. ಕಾರ್ಮಿಕ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಯಿತು.

ಸಾಲಬಾಧೆಯಿಂದ ಸಾವನ್ನಪ್ಪಿದ ರೈತಕುಟುಂಬಕ್ಕೆ 5 ಲಕ್ಷರೂ.ಗಳ ಚೆಕ್ ನ್ನು ವಿತರಿಸಲಾಯಿತು. ಎಸ್ .ಸಿ ಎಸ್ ಟಿ..ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕ್ಕೆ ಅನುಕೂಲವಾಗಲೆಂದು ಸಹಾಯಧನದ ಚೆಕ್ ನ್ನು ವಿತರಸಲಾಯಿಿತು

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎಸ್. ಅಶ್ವಥಿ, ಜಿ.ಪಂ ಸಿ,ಇ,ಒ ಜುಲ್ಪಿಕರ್ ಉಲ್ಲಾ ರವರು, ಪಾಂಡವಪುರದ ಉಪವಿಭಾಗಾಧಿಕಾರಿಗಳಾದ ಶಿವಾನಂದಾಮೂರ್ತಿರವರು, ಕೆ.ಆರ್ ಪೇಟೆ ತಹಶೀಲ್ದಾರ್ ಶಿವಮೂರ್ತಿ ರವರು,ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡರವರು, ಮುಡಾದ ಅಧ್ಯಕ್ಷರಾದ ಶ್ರೀನಿವಾಸ್ ರವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: Proceed – Podi –Free- Taluk-kr pet-Minister -Narayana Gowda.