ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರಾಗಿ ಪ್ರೊ, ಕೆ.ಎನ್. ಗಂಗಾನಾಯಕ್ ನೇಮಕ….

ಮೈಸೂರು,ಜನವರಿ,29,2021(www.justkannada.in): ಮೈಸೂರು ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ, ಕೆ.ಎನ್. ಗಂಗಾನಾಯಕ್ ಅವರನ್ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಹುದ್ದೆಗೆ ನೇಮಕ ಮಾಡಲಾಗಿದೆ.Pro, K.N. Ganganayak –appointed-Registrar-University of Karnataka Folklore

ಪ್ರೊ, ಕೆ.ಎನ್. ಗಂಗಾನಾಯಕ್   ಅವರನ್ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮ, 2011ರ ಪ್ರಕರಣ 16(1)ರಲ್ಲಿನ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸದರಿ ಹುದ್ದೆಗೆ ಕೆ.ಎ.ಎಸ್ ಅಧಿಕಾರಿಯ ನೇಮಕಾತಿಯಾಗುವವರೆಗೆ ನೇಮಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

Pro, K.N. Ganganayak –appointed-Registrar-University of Karnataka Folklore
ಕೃಪೆ-internet

ಪ್ರೊ. ಕೆ.ಎನ್. ಗಂಗಾನಾಯಕ್ ಅವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಹುದ್ದೆಗೆ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವುದು. ತದನಂತರ ಸದರಿಯವರ ನಿಯೋಜನೆಗೆ ಸಂಬಂಧಿಸಿದಂತೆ ಸೇವಾ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

Key words: Pro, K.N. Ganganayak –appointed-Registrar-University of Karnataka Folklore