‘ಪ್ರಿಯಾಂಕ್  ಖರ್ಗೆ ಯಾರಿಗೂ ತೊಂದರೆ ಮಾಡಿಲ್ಲ: ಸುಮ್ಮನೆ ಅಪಪ್ರಚಾರ ನಡೆದಿದೆ’- ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

ಕಲ್ಬುರ್ಗಿ,ಮೇ,11,2019(www.justkannada.in): ಪ್ರಿಯಾಂಕ್ ಖರ್ಗೆ ಅವರಿಂದ ತನಗೆ ತೊಂದರೆಯಾಯಿತು ಎಂದು ಜಾಧವ್ ಹೇಳುತ್ತಿದ್ದಾನೆ. ಪ್ರಿಯಾಂಕ್ ಖರ್ಗೆ ತನ್ನ ಸಾಮರ್ಥ್ಯದಿಂದ ಮೇಲೆ ಬಂದಿದ್ದಾರೆ.‌ ಒಂದು ಸಲ ಸೋತು ಎರಡು ಸಲ ಶಾಸಕನಾಗಿ ಈಗ ಸಚಿವನಾಗಿ ಕೆಲಸ‌ ಮಾಡುತ್ತಿದ್ದಾರೆ ಅವರೇಕೆ ನಿಮಗೆ ಸ್ಥಾನ ತಪ್ಪಿಸುತ್ತಿದ್ದಾರೆ ? ಪ್ರಿಯಾಂಕ್ ನಿಂದ ಯಾರಿಗೂ ತೊಂದರೆಯಾಗಿಲ್ಲ ಸುಮ್ಮನೆ ಅಪಪ್ರಚಾರ ನಡೆಯುತ್ತಿದೆ ” ಎಂದು ಸಂಸದರಾದ ಹಾಗೂ ಕಾಂಗ್ರೇಸ್ ನಾಯಕಎಂ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೋಡ್ಲಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, ಪಕ್ಷಕ್ಕೆ ಎಲ್ಲರೂ ನಿಷ್ಠರಾಗಿರಬೇಕು. ನನ್ನ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದು ಪಕ್ಷದ ವಿರುದ್ದ ಹೋಗಿಲ್ಲ. ಆ ನಿಷ್ಠೆ ಎಲ್ಲರಲ್ಲೂ ಇರಬೇಕು. ಯಾಕೆಂದರೆ ಪಕ್ಷ ದೊಡ್ಡದು ನಾನು ಇದ್ದರೂ ಇರುತ್ತದೆ ನಾನು ಇಲ್ಲದಿದ್ದರೂ ಪಕ್ಷ ಇರುತ್ತದೆ ಎಂದು ಭಾವುಕರಾಗಿ‌ ನುಡಿದರು.

ಕಾಂಗ್ರೆಸ್ ಸರಕಾರ ಎಲ್ಲ ವರ್ಗದ ಜನರಿಗೆ ಬಡವರಿಗೆ ದೀನ ದಲಿತರಿಗೆ ಹಲವಾರು ಅಭಿವೃದ್ದಿ ಕ್ರಮಗಳನ್ನು ಕೈಗೊಂಡಿದೆ. ಜನವಿರೋಧಿ ಸರಕಾರ ನಡೆಸಿದ ಮೋದಿ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ತಾನು ಏನು ಮಾಡಿದ ಎನ್ನುವುದು ಮೊದಲು ಹೇಳಲಿ ಎಂದು ಸವಾಲು ಹಾಕಿದರು.

ನನ್ನ ಬಗ್ಗೆ ಸುಮ್ಮನೆ ಅಪಪ್ರಚಾರ ನಡೆಯಿತು. ನನ್ನ ಆಸ್ತಿ ಬಗ್ಗೆ ಏನೇನೋ ಹೇಳಿದರು. ನಾನು ಏನೂ ಮಾತನಾಡಲಿಲ್ಲ. ಯಾಕೆಂದರೆ ಇಂತಹ ಫಾಲ್ತು ಮಾತುಗಳಿಗೆ ಉತ್ತರ ಕೊಡಲ್ಲ.‌ ನೋಡೋಣ ಅವರಿಗೆ ಧಮ್ ಇದ್ದರೆ ಮುಂದೊಂದು ದಿನ ಏನಾದರೂ ಮಾಡಿದರೆ ಉತ್ತರಿಸುತ್ತೇನೆ ಎಂದು ಅಪಪ್ರಚಾರ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದರು.

ವೇದಿಕೆಯ ಮೇಲೆ ಸಚಿವರಾದ ಎಂ ಬಿ ಪಾಟೀಲ್, ರಾಜಶೇಖರ್ ಪಾಟೀಲ್, ರಹೀಂಖಾನ್,‌ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಶಾಸಕರಾದ ನಾರಾಯಣರಾವ್, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಬಾಬುರಾವ್ ಚವ್ಹಾಣ್, ಡಿವಿಡ್ ಸಿಮೇಯೋನ್, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

Key words: Priyanka kharge- did not- hurt -anyone- Mallikarjun Kharge