Saturday, September 5, 2026

BDA Apartments

Home Cinema ಮೆಟ್ ಗಾಲಾದಲ್ಲಿ ಗಮನ ಸೆಳೆದ ಪ್ರಿಯಾಂಕಾ ವಿಚಿತ್ರ ವೇಷಭೂಷಣ

ಮೆಟ್ ಗಾಲಾದಲ್ಲಿ ಗಮನ ಸೆಳೆದ ಪ್ರಿಯಾಂಕಾ ವಿಚಿತ್ರ ವೇಷಭೂಷಣ

ನ್ಯೂಯಾರ್ಕ್:ಮೇ-7:(www.justkannada.in) ಮೆಟ್ ಗಾಲಾ-2019 ಫ್ಯಾಷನ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರ ವಿಭಿನ್ನ ವಸ್ತ್ರಾಲಂಕಾರ ಎಲ್ಲರ ಗಮನ ಸೆಳೆದಿದೆ.

ಈ ಬಾರಿಯ ಮೆಟ್ ಗಾಲಾ-2019 ವಿಷೇಷವಾದ ಥೀಮ್ ನೊಂದಿಗೆ ಕ್ಯಾಂಪ್: ನೋಟ್ಸ್ ಆಫ್ ಫ್ಯಾಷನ್’ ಎಂದು ಹೆಸರಿಡಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಚೋಪ್ರಾ,ಗುರುತೇ ಸಿಗದ ರೀತಿಯಲ್ಲಿ ವಿಚಿತ್ರ ಅಲಂಕಾರ, ವಿಭಿನ್ನ ವೇಷದಲ್ಲಿ ಪಾಲ್ಗೊಂಡು ನೆರೆದಿದ್ದವರನ್ನು ದಂಗುಬಡಿಸಿದರು.

ವಿಚಿತ್ರವಾದ ಗುಂಗುರು ಕೂದಲನ್ನು ಕೆದರೀತಿಯ ಕೇಶ ವಿನ್ಯಾಸ, ಸಿಲ್ವರ್, ಪಿಂಕ್, ಎಲ್ಲೋ ಬಣ್ಣದ ಗೌನ್, ಕಣ್ಣಿನ ಸುತ್ತಲುವಿಭಿನ್ನ ಶೈಲಿಯ ಅಲಂಕಾರ, ಕಣ್ಣುಕುಕ್ಕುವ ಭಯಂಕರವಾದ ಮೇಕಪ್ ನಲ್ಲಿ ಗುರುತೇ ಸಿಗದಂತೆ ಕಾಣಿಸಿಕೊಂಡಿದ್ದಾರೆ.

ಇನ್ನು ಮೆಟ್ ಗಾಲಾ ಫ್ಯಾಷನ್ ನಲ್ಲಿ ಈಬಾರಿ ದೀಪಿಕಾ ಪಡುಕೋಣೆ ಕೂಡ ಭಾಗವಹಿಸಿದ್ದು, ಗುಲಾಬಿ ಬಣ್ಣದ ಗೌನಿನಲ್ಲಿ ಬಾರ್ಬಿ ಬೊಂಬೆಯಂತೆ ಕಂಗೊಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಚೋಪ್ರಾ ಹಾಜರಾಗುತ್ತಿದ್ದು, ಈ ಬಾರಿ ಪ್ರಿಯಾಂಕಾ ಪತಿ ನಿಕ್ ಕೂಡ ಭಾಗವಹಿಸಿದ್ದರು. ಮೆಟ್ ಗಾಲಾ ಪ್ರತಿ ಬಾರಿ ಒಂದು ಥೀಮ್ ನಿಂದ ನಿರ್ವಹಿಸಲಾಗುತ್ತದೆ. ಈ ಬಾರಿ ಮೆಟ್ ಗಾಲಾ ಥೀಮ್ ಗೆ ‘ಕ್ಯಾಂಪ್: ನೋಟ್ಸ್ ಆಫ್ ಫ್ಯಾಷನ್’ ಎಂದು ಹೆಸರಿಡಾಲಾಗಿದೆ. ಅಂದರೆ ಸಾಧ್ಯವಾದಷ್ಟು ಭಿನ್ನ ರೀತಿಯ ಪೋಷಾಕಿನಲ್ಲಿ ಫ್ಯಾಷನ್ ಹೊರಹೊಮ್ಮುವಂತೆ ಪಿಂಕ್ ಕಾರ್ಪೆಟ್‌ ಮೇಲೆ ಎಲ್ಲರ ಕಣ್ಣು ಕುಕ್ಕುವಂತಿರಬೇಕು! ಎಂದಾಗಿತ್ತು. ಈ ನಿಟ್ಟಿನಲ್ಲಿ ಪ್ರಿಯಾಂಕಾ ಅವರು ಈ ಬಾರಿ ವಿಭಿನ್ನವಾದ ಅವತಾರದಲ್ಲಿ ಗಮನಸೆಳೆದಿದ್ದಾರೆ.

ಮೆಟ್ ಗಾಲಾದಲ್ಲಿ ಗಮನ ಸೆಳೆದ ಪ್ರಿಯಾಂಕಾ ವಿಚಿತ್ರ ವೇಷಭೂಷಣ
Priyanka Chopra, Met Gala 2019, different look