ಟ್ರಂಪ್ ಬಳಿ ಮೋದಿ ನಮ್ಮ ವಿದೇಶಾಂಗ ನೀತಿಯನ್ನು ಅಡವಿಟ್ಟಿದ್ದಾರಾ? ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ಮೇ,14,2025 (www.justkannada.in): ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಗೆ ನಾನೇ ಕಾರಣ. ವ್ಯಾಪಾರ ತೆರಿಗೆ ಅಮಿಷ ಒಡ್ಡಿದ್ದೇನೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗಾದ್ರೆ ಟ್ರಂಪ್ ಬಳಿ ಮೋದಿ ನಮ್ಮ ವಿದೇಶಾಂಗ ನೀತಿಯನ್ನು ಅಡವಿಟ್ಟಿದ್ದಾರಾ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮೋದಿಯವರ ಮನ್ ಕೀ ಬಾತ್ ಕೇಳಿ ಜನರ ಕಿವಿ ಕಿತ್ತೋಗಿದೆ.  ಡೊನಾಲ್ಡ್ ಟ್ರಂಪ್ ಮೋದಿ ಸ್ನೇಹದಲ್ಲಿ ಎಷ್ಟು ಆಳ ಇದೆ ಗೊತ್ತಿಲ್ಲ ಎಂದರು.

ಆದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ ವಿಚಾರ,  ನಿನ್ನೆ ಯೋಧರಿಗೆ ಧೈರ್ಯ ತುಂಬಿರೋದು ಶ್ಲಾಘನೀಯ ಕಾರ್ಯ. ನಮ್ಮ ಯೋಧರ ಕಾರ್ಯ ವೈಖರಿಯನ್ನ ಇಡೀ ರಾಷ್ಟ್ರವೇ ಮೆಚ್ಚುತ್ತಿದೆ.  ಪಹಲ್ಗಾಮ್ ಉಗ್ರರ ದಾಳಿ ಬಳಿಕ ಮೋದಿ ಕಾಣಿಸಿಕೊಂಡಿದ್ದು ಬಿಹಾರದಲ್ಲಿ.  ಏಪ್ರಿಲ್ 22ರ ಬಳಿಕ ಮೋದಿ ಬಹಿರಂಗವಾಗಿ ಎಲ್ಲೂ ಕಾಣಿಸಿಲ್ಲ. ಎಲ್ಲೇ ಬ್ಲಾಕ್ ಔಟ್ ಮಾಡಿದ್ರೂ ಅಲ್ಲಿಗೆ  ಹೋಗಬಹುದಿತ್ತು. ಏಪ್ರಿಲ್ 22ರಿಂದ ಮೇ12ರವರಗೆ ಮೋದಿ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು

ಟ್ರಂಪ್ ನಾಲ್ಕು ಬಾರಿ ಹೇಳಿದ್ದಾರೆ ಪಾಕ್ ಕದನ ವಿರಾಮಕ್ಕೆ ನಾನು ಕಾರಣ ಅಂತ ಹೇಳಿದ್ದಾರೆ.  ಟ್ರಂಪ್ ಭಾರತವನ್ನ ಪಾಕ್  ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ.  ಉಗ್ರರ ಸ್ಟೇಟ್ ಗೂ ನಮಗೂ  ಹೋಲಿಕೆ ಮಾಡಿದ್ದಾರೆ.  ವ್ಯಾಪಾರ ತೆರಿಗೆ ಆಮಿಷ  ಒಡ್ಡಿದ್ದೇನೆಂದು ಹೇಳಿದ್ದಾರೆ. ಪಾಕ್ ಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಪಾಕ್ ಗೆ ನೆರವು ಕೊಡಿಸಿದ್ದಾರೆ. ಪಾಕ್  ಮತ್ತೆ ಆ ಹಣದಿಂದ  ಭಯತ್ಪಾದಕ ಚಟುವಟಿಕೆಯನ್ನೇ ಮಾಡುತ್ತದೆ.  ನಮ್ಮ ವಿದೇಶಾಂಗ ನೀತಿಯನ್ನ ಟ್ರಂಪ್ ಬಳಿ ಮೋದಿ ಅಡವಿಟ್ಟಿದ್ದಾರಾ. ಟ್ರಂಪ್ ಮುಂದೆ ಮೋದಿ ಮಂಡಿರಿದ್ರಾ ಅಥವಾ ಕಾಲಿಗೆ ಬಿದ್ರಾ ಗೊತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು.

Key words: PM Modi, Trump, Minister , Priyank Kharge