ನಂಜನಗೂಡು ಖಾಸಗಿ ಬಸ್ ನಿಲ್ದಾಣದ ಬಳಿ ಯುವಕನ ಮೃತ ದೇಹ ಪತ್ತೆ

ಮೈಸೂರು,ನವೆಂಬರ್,04,2020(www.justkannada.in) : ನಂಜನಗೂಡು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.

jk-logo-justkannada-logoಮೃತ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ಪ್ರದೀಪ್ (21) ಎಂದು ಗುರುತಿಸಲಾಗಿದ್ದು, ಈತ ನಂಜನಗೂಡು ಪಟ್ಟಣದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೆನ್ನೆ ಬೇಕರಿ ಮಾಲಿಕನಿಂದ ರಜೆ ಪಡೆದು ಮೈಸೂರಿಗೆ ಸ್ನೇಹಿತರ ಜೊತೆ ಹೋಗಿದ್ದನಂತೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ವಾಹನ ಸಮೇತ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Private-bus-Nanjangud-station-young-man-near-Dead-Body-Detect

key words : Private-bus-Nanjangud-station-young-man-near-Dead-Body-Detect