ಸೆ.11 ರಂದು ಖಾಸಗಿ ಸಾರಿಗೆ ಮಾಲೀಕರ ಮುಷ್ಕರ: ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸಚಿವ ರಾಮಲಿಂಗರೆಡ್ಡಿ ಸೂಚನೆ.

ಬೆಂಗಳೂರು, ಸೆ.7,2023(www.justkannada.in):  ಸೆಪ್ಟಂಬರ್ 11 ರಂದು ಖಾಸಗಿ ಸಾರಿಗೆ ವಾಹನ ಮಾಲೀಕರು ಹಾಗೂ  ಚಾಲಕರು ಮುಷ್ಕರಕ್ಕೆ ಮುಂದಾದ ಹಿನ್ನೆಲೆ  ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸಾರಿಗೆ ಸಿಬ್ಬಂದಿ  ಮತ್ತು ಪೊಲೀಸರಿಗೆ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

ಬಿಎಂಟಿಸಿ ಎಂಡಿ, ಕೆಎಸ್‌ಆರ್​ಟಿಸಿ ಎಂಡಿ, ಸಾರಿಗೆ ಇಲಾಖೆಯ ಕಮೀಷನರ್  ಹಾಗೂ ‌ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಚರ್ಚೆ ನಡೆಸಿದ್ದು, ಪ್ರತಿಭಟನೆಯಿಂದಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್ 11 ರಂದು ಜನ ಸಾಮಾನ್ಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಬಿಎಂಟಿಸಿ, ಕೆಎಸ್‌ಆರ್ ​ಟಿಸಿ ಎಂಡಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ  ಚರ್ಚೆ ನಡೆಸಿರುವ ಸಚಿವ ರಾಮಲಿಂಗರೆಡ್ಡಿ, ಸೆಪ್ಟೆಂಬರ್ 10ರ ರಾತ್ರಿಯಿಂದಲೇ ಫಿಲ್ಡಿಗಿಳಿಯುವಂತೆ ಸೂಚಿಸಿದ್ದಾರೆ. ರಾತ್ರಿ ‌12 ರಿಂದ ಖಾಸಗಿ ‌ಸಾರಿಗೆ ಬಂದ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಕಾರ್ಯನಿರ್ವಹಿಸುವಂತೆ ಲಾ ಅಂಡ್ ಅರ್ಡರ್ ಮತ್ತು ಟ್ರಾಫಿಕ್ ಪೊಲೀಸರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Key words: Private- transport – strike – September 11-Minister- Ramalingareddy -instructs -action