ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ.

ಗುಜರಾತ್,ಡಿಸೆಂಬರ್,30,2022(www.justkannada.in): ಗುಜರಾತ್ ​​ನ ಅಹಮದಾಬಾದ್​ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಪ್ರಧಾನಿ ಮೋದಿ ಅವರ ಹೀರಾಬೆನ್  ಕೊನೆಯುಸಿರೆಳೆದಿದ್ದು ಹಿಂದೂ ಸಂಪ್ರದಾಯದಂತೆ ಇಂದು ಅಂತ್ಯಕ್ರಿಯೆ ನರೆವೇರಿತು.

ಕಳೆದ ಎರಡು ದಿನಗಳಿಂದ ಅಹಮದಾಬಾದ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೇನ್ ಅವರು, ಇಂದು ಚಿಕಿತ್ಸೆ ಫಲಿಸದೇ ನಿಧನರಾದರು.

ಶತಾಯುಷಿಯಾಗಿದ್ದ ತಮ್ಮ ತಾಯಿಯ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ ಅವರು ಅಂತಿಮಯಾತ್ರೆಯಲ್ಲಿ ತಾಯಿ ಹೀರಾಬೆನ್ ಅವರ ಮೃತದೇಹಕ್ಕೆ ಹೆಗಲು ಕೊಟ್ಟರು.  ನಂತರ ಗಾಂಧಿ ನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅವರ ಅಂತ್ಯಕ್ರಿಯೆ ನೆರವೇರಿತು. ತಾಯಿಯ ಪಾರ್ಥೀವಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ಅಂತ್ಯಕ್ರಿಯೆಯಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ , ಸುತ್ತೂರು ಶ್ರೀಗಳು ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

Key words: Prime Minister -Modi’s –mother- Heeraben –death-crimination