Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ದಿಲ್ಲಿಯಲ್ಲಿ ಸಂಸದರ ಬಹುಮಹಡಿ ಫ್ಲ್ಯಾಟ್‌ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ದಿಲ್ಲಿಯಲ್ಲಿ ಸಂಸದರ ಬಹುಮಹಡಿ ಫ್ಲ್ಯಾಟ್‌ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ, ನವೆಂಬರ್ 22, 2020 (www.justknnda.in): ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ನ.23ರಂದು ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಈ ಫ್ಲ್ಯಾಟ್‌ಗಳು ನವದೆಹಲಿಯ ಡಾ ಬಿ ಡಿ ಮಾರ್ಗದಲ್ಲಿವೆ. 80 ವರ್ಷಗಳಿಗಿಂತ ಹಳೆಯದಾದ ಎಂಟು ಹಳೆಯ ಬಂಗಲೆಗಳನ್ನು 76 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಪುನರಾಭಿವೃದ್ಧಿ ಮಾಡಲಾಗಿದೆ.