Saturday, November 14, 2026

Dasara Wishes

ಐದು ತಿಂಗಳಲ್ಲೇ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ಸಿಎಂ ಸಿದ್ದರಾಮಯ್ಯಗೆ ಖು...
Happy Dasara
Home Front Page ಜ.19 ರಂದು ಯಾದಗಿರಿಗೆ ಪ್ರಧಾನಿ ಮೋದಿ:  ಶಾಲಾ-ಕಾಲೇಜುಗಳಿಗೆ ರಜೆ.

ಜ.19 ರಂದು ಯಾದಗಿರಿಗೆ ಪ್ರಧಾನಿ ಮೋದಿ:  ಶಾಲಾ-ಕಾಲೇಜುಗಳಿಗೆ ರಜೆ.

ಯಾದಗಿರಿ,ಜನವರಿ,17,2023(www.justkannada.in): ಜನವರಿ 19ಕ್ಕೆ ಪ್ರಧಾನಿ ನರೇಂದ್ರ ಮೋದಿ  ಅವರು ಯಾದಗಿರಿ ಜಿಲ್ಲೆಗೆ  ಪ್ರವಾಸ ಕೈಗೊಂಡಿದ್ದಾರೆ.

ಜನವರಿ 19ರಂದು ಪ್ರಧಾನಿ ಮೋದಿ ಹುಣಸಗಿ ತಾಲೂಕಿನ ಕೊಡೆಕಲ್​​ನಲ್ಲಿ ನಡೆಯುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದು,  ಈ ಹಿನ್ನೆಲೆಯಲ್ಲಿ  ಜನವರಿ.19ರಂದು ಹುಣಸಗಿ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಾಗಿದೆ ಎಂದು ಹುಣಸಗಿ ತಹಶೀಲ್ದಾರ್​​ ಜಗದೀಶ್ ಚೌರ್ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿಯವರು 1,050 ಕೋಟಿ ರೂ. ವೆಚ್ಚದಲ್ಲಿ ಬಸವಸಾಗರ ಜಲಾಶಯಕ್ಕೆ ನಿರ್ಮಾಣ ಮಾಡಿರುವ 365 ಗೇಟ್‌ಗಳನ್ನು ಉದ್ಘಾಟಿಸಲಿದ್ದಾರೆ. ಹಾಗೇ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಜಲಧಾರೆ ಯೋಜನೆಯ 2,004 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು.

Key words: Prime Minister-Modi-visit- Yadgiri -January 19.