Thursday, September 17, 2026

BDA Apartments

Home Crime ಪ್ರಧಾನಿ ಮೋದಿ ಭಾವಚಿತ್ರವುಳ್ಳ ಆಶ್ಲೀಲ ಪೋಸ್ಟ್ ಶೇರ್ ಮಾಡಿದ್ದ ಕಿಡಿಗೇಡಿಗಳ ವಿರುದ್ದ ಸೈಬರ್ ಕ್ರೈಮ್ ಪೋಲಿಸರಿಗೆ...

ಪ್ರಧಾನಿ ಮೋದಿ ಭಾವಚಿತ್ರವುಳ್ಳ ಆಶ್ಲೀಲ ಪೋಸ್ಟ್ ಶೇರ್ ಮಾಡಿದ್ದ ಕಿಡಿಗೇಡಿಗಳ ವಿರುದ್ದ ಸೈಬರ್ ಕ್ರೈಮ್ ಪೋಲಿಸರಿಗೆ ದೂರು….

ಮೈಸೂರು,ಜೂ,26,2019(www.justkannada.in): ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಆಶ್ಲೀಲ ಪೋಸ್ಟ್  ಶೇರ್ ಮಾಡಿದ್ದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮೈಸೂರಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜೂನ್ 21 ಯೋಗ ಡೇ ದಿನದಂದು  ಪ್ರಧಾನಿ ಮೋದಿ ವಿರುದ್ದ ಸಾಮಾಜಿಕ ಜಾಲ ತಾಣಗಳಲ್ಲಿ ಕಿಡಿಗೇಡಿಗಳು  ಆಶ್ಲೀಲ ಪೋಸ್ಟ್  ಶೇರ್ ಮಾಡಿದ್ದರು. ಇದೀಗ ಕಿಡಿಗೇಡಿಗಳ ಕೃತ್ಯಕ್ಕೆ ಮೈಸೂರಿನ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳನ್ನ ಕೂಡಲೇ ಬಂಧಿಸುವಂತೆ ಸೈಬರ್ ಕ್ರೈಮ್ ಪೋಲಿಸರಿಗೆ ದೂರು ನೀಡಿದ್ದಾರೆ.

ಇದು ದೇಶದ ಪ್ರಧಾನ ಮಂತ್ರಿಗೆ  ಮೋದಿ ಮತ್ತು ಮಹಿಳೆಯರಿಗೆ ಆದಂತಹ ಅವಮಾನ. ಹೀಗಾಗಿ ಈ  ರೀತಿಯ ವಿಕೃತ ಪೋಸ್ಟ್  ಮಾಡಿದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Key words: Prime Minister Modi – cybercrime- police – complains -against –mischief