ಯಾದಗಿರಿ,ಜನವರಿ,19,2023(www.justkannada.in): ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಕೊಡೆಕಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಬಸವಸಾಗರದ ಸ್ಕಾಡಾ ಗೇಟ್ ಗಳಿಗೆ ಚಾಲನೆ ನೀಡಿದರು.![]()
ಕೊಡೆಕಲ್ ನಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಮೂರು ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು ಬಸವಸಾಗರದ ಸ್ಕಾಡಾ ಗೇಟ್ ಗಳಿಗೆ ಚಾಲನೆ ನೀಡಿದರು . 1050 ಕೋಟಿ ವೆಚ್ಚದಲ್ಲಿ ಸ್ಕಾಡಾ ಗೇಟ್ ಗಳನ್ನ ನಿರ್ಮಾಣ ಮಾಡಲಾಗಿದ್ದು ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಗೇಟ್ ಗಳನ್ನ ಅಳವಡಿಕೆ ಮಾಡಲಾಗಿದೆ. ಈ ಗೇಟ್ ಗಳು ಅತ್ಯಾದುನಿಕ ತಂತ್ರಜ್ಞಾನದಿಂದ ಕೂಡಿದೆ. 4.5ಹೆಕ್ಟೆರ್ ಪ್ರದೇಶಕ್ಕೆ ನೀರು ತಲುಪಿಸುವ ಯೋಜನೆ ಇದಾಗಿದೆ. 
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ಮೋದಿ ಮೋದಿ ಚಾಲನೆ ನೀಡಿದ್ದು, ಸೂರತ್ ಚೆನ್ನೈ ಎಕ್ಸ್ ಪ್ರೆಸ್ ಹೈವೆಗೆ ಅಡಿಗಲ್ಲು ಹಾಕಿದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಭಗವಂತಕೂಬಾ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
Key words: Prime Minister- Modi –aunched- multi-village -drinking -water -project – SCADA gates – Basavasagar.







