Sunday, September 20, 2026

BDA Apartments

ಅವಿಶ್ವಾಸ ಮತದ ಇಕ್ಕಟ್ಟು: ಪ್ರತಿಭಟನೆ ನಡೆಸುವಂತೆ ದೇಶದ ಯುವಕರಿಗೆ ಪ್ರಧಾನಿ ...
Home Front Page ಅವಿಶ್ವಾಸ ಮತದ ಇಕ್ಕಟ್ಟು: ಪ್ರತಿಭಟನೆ ನಡೆಸುವಂತೆ ದೇಶದ ಯುವಕರಿಗೆ ಪ್ರಧಾನಿ ಇಮ್ರಾನ್ ಖಾನ್ ಕರೆ

ಅವಿಶ್ವಾಸ ಮತದ ಇಕ್ಕಟ್ಟು: ಪ್ರತಿಭಟನೆ ನಡೆಸುವಂತೆ ದೇಶದ ಯುವಕರಿಗೆ ಪ್ರಧಾನಿ ಇಮ್ರಾನ್ ಖಾನ್ ಕರೆ

ಬೆಂಗಳೂರು, ಏಪ್ರಿಲ್ 03, 2022 (www.justkannada.in): ಪ್ರತಿಭಟನೆ ನಡೆಸುವಂತೆ ದೇಶದ ಯುವಕರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.

ನಿರ್ಣಾಯಕ ಅವಿಶ್ವಾಸ ಮತದ ಮುನ್ನ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಆಡಳಿತ ಪಕ್ಷದ ಸಂಸದರಿಗೆ ಗೆಲುವು ಸಾಧಿಸುವ ಭರವಸೆ ನೀಡಿದ್ದಾರೆ.

69ರ ಇಮ್ರಾನ್ ಖಾನ್ ಕ್ರಿಕೆಟಿಗನಾಗಿ ನಂತರ ರಾಜಕಾರಣಿಯಾಗಿ ಬದಲಾಗಿದ್ದರು. ಹೊಸ ಪಾಕಿಸ್ತಾನ ರಚಿಸುವ ಭರವಸೆಯೊಂದಿಗೆ 2018 ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಪ್ರಧಾನಿಯಾಗಿ ವೈಪಲ್ಯ ಅನುಭವಿಸಿದ್ದಾರೆ.

ಎರಡು ಮಿತ್ರ ಪಕ್ಷಗಳು ತಮ್ಮ ಬೆಂಬಲವನ್ನು ಹಿಂಪಡೆದುಕೊಂಡಿದ್ದವು. ಬಹುಮತ ಕಳೆದುಕೊಂಡರೂ ರಾಜೀನಾಮೆ ನೀಡುವುದಿಲ್ಲ ಎಂದು ಧಿಕ್ಕರಿಸಿದ ಖಾನ್ ಅವರು ಕೊನೆಯ ಎಸೆತದವರೆಗೂ ಹೋರಾಡುತ್ತೇನೆ ಎಂದಿದ್ದರು.