Saturday, September 19, 2026

BDA Apartments

ನಟ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿದ್ದ ಅರ್ಚಕ ಸಸ್ಪೆಂಡ್ BDA JK_Adv BDA Adv
Home Cinema ನಟ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿದ್ದ ಅರ್ಚಕ ಸಸ್ಪೆಂಡ್

ನಟ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿದ್ದ ಅರ್ಚಕ ಸಸ್ಪೆಂಡ್

ಬಳ್ಳಾರಿ,ಆಗಸ್ಟ್,6,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಫೋಟೊವನ್ನು  ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡಿದ್ದ ಅರ್ಚಕನನ್ನ ಅಮಾನತು ಮಾಡಲಾಗಿದೆ.

ಬಳ್ಳಾರಿಯ  ಕುರುಗೋಡು ಗ್ರಾಮದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಮಾವಸ್ಯೆಯಂದು ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಫೋಟೋ ಇಟ್ಟು ಅದಕ್ಕೆ ಮಂಗಳಾರತಿ ಮಾಡಿ ಪೂಜೆ ನಡೆಸಿದ್ದಾರೆ. ಸಂಪ್ರದಾಯಕ್ಕೆ ಧಕ್ಕೆ, ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಅರ್ಚಕ ಮಲ್ಲಿಯನ್ನು ಅಮಾನತು ಮಾಡಲಾಗಿದೆ.ನಟ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿದ್ದ ಅರ್ಚಕ ಸಸ್ಪೆಂಡ್ darshan

ದೇವಾಲಯದ ಸಂಪ್ರದಾಯದ ವಿರುದ್ಧವಾಗಿ ವರ್ತಿಸಿದ ಅರ್ಚಕ ಮಲ್ಲಿಯನ್ನು ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ಅವರನ್ನು ಅಮಾನತು ಮಾಡಿದ್ದಾರೆ. ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಅನುಮತಿ ನಿರಾಕರಿಸಲಾಗಿದೆ.

Key words: Priest, suspended, pooja, actor, darshan photo