Thursday, August 20, 2026

BDA Apartments

Home Crime ವೀಲಿಂಗ್ ಹುಚ್ಚಾಟಕ್ಕೆ ಅರ್ಚಕ ಬಲಿ

ವೀಲಿಂಗ್ ಹುಚ್ಚಾಟಕ್ಕೆ ಅರ್ಚಕ ಬಲಿ

ಕೋಲಾರ,ಆಗಸ್ಟ್,22,2024 (www.justkannada.in): ರಾಜ್ಯದಲ್ಲಿ ಬೈಕ್ ವೀಲಿಂಗ್ ಮಾಡಿ ಪುಂಡಾಟ ಮೆರೆಯುವವರ ಸಂಖ್ಯೆ ಜಾಸ್ತಿಯಾಗಿದ್ದು ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿ ದಂಡ ವಿಧಿಸಿದರೂ ಸಹ  ಬೈಕ್ ವೀಲ್ ಮಾಡುವ ಯುವಕರ ಚಾಳಿ ನಿಲ್ಲುತ್ತಿಲ್ಲ. ಇದೀಗ  ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಅರ್ಚಕರೊಬ್ಬರು ಬಲಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ವೀಲಿಂಗ್ ಮಾಡುತ್ತಿದ್ದ ವೇಳೆಅರ್ಚಕರೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಕೋಲಾರದ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ. ಅರ್ಚಕ ಗೋಪಾಲ್ ರಾವ್ (45) ಮೃತಪಟ್ಟವರು.

ಬಂಗಾರಪೇಟೆಯ ಸಂತೆಗೇಟ್ ಬಳಿ ಪುಂಡರು ವ್ಹೀಲಿಂಗ್ ಮಾಡುತ್ತಿದ್ದರು. ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ  ಅರ್ಚಕ ಗೋಪಾಲ್ ರಾವ್ ಡಿಕ್ಕಿಯಾಗಿದೆ. ಈ ವೇಳೆ ಗಂಭೀರ ಗಾಯಗೊಂಡ ಗೋಪಾಲ್ ರಾವ್ ರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Priest, death, bike, wheeling, collide