ಕಮರ್ಷಿಯಲ್ ಸಿಲಿಂಡರ್ ಬೆಲೆ 135 ರೂ. ಇಳಿಕೆ.

ನವದೆಹಲಿ,ಜೂನ್,1,2022(www.justkannada.in): ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಕಮರ್ಷಿಯಲ್ ಸಿಲಿಂಡರ್ ಬೆಲೆಯು  135 ರೂ. ಕಡಿಮೆಯಾಗಿದೆ.

ಇಂದಿನಿಂದ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದು  ಇದೀಗ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 2354 ರೂ.ಗಳ ಬದಲು 2219 ರೂ. ಆಗಿದೆ. ಹಾಗೆಯೇ ಮುಂಬೈನಲ್ಲಿ  2306 ರೂ. ಇತ್ತು. ಇನ್ಮುಂದೆ  2171.50 ರೂ. ಗೆ ವಾಣಿಜ್ಯ ಬಳಕೆ ಸಿಲಿಂಡರ್ ಸಿಗಲಿದೆ. ಕಳೆದ ಮೇ 1 ರಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು 100 ರೂ. ಹೆಚ್ಚಿಸಲಾಗಿತ್ತು.

19 ಕೆಜಿ ತೂಗುವ ವಾಣಿಜ್ಯ ಬಳಕೆ ಸಿಲಿಂಡರ್​ಗಳ ಬೆಲೆಯನ್ನು ಏಪ್ರಿಲ್ 1ರಂದು ಪೆಟ್ರೋಲಿಯಂ ಕಂಪನಿಗಳು  250 ರೂ. ಹೆಚ್ಚಿಸಿತ್ತು. ಅದಕ್ಕೂ ಮೊದಲು ಮಾರ್ಚ್ 1ರಂದು  105 ರೂ. ಹೆಚ್ಚಿಸಲಾಗಿತ್ತು.

Key words: price – commercial cylinder – Rs 135- Decrease.