Sunday, August 16, 2026

BDA Apartments

Home Front Page ‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್ ಪ್ರಶಸ್ತಿ…

‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್ ಪ್ರಶಸ್ತಿ…

ಮೈಸೂರು,ಮಾರ್ಚ್,26,2021(www.justkannada.in) : ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್  2020 ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.jk

ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ ಎಂ ಎಸ್ ಸಾಗರ್ ಅವರು ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಕಳೆದ 7 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಸಾಲಿನಲ್ಲಿ ‘ಬಹುರೂಪಿ’ಯ ಎರಡು ಕೃತಿಗಳು ಅಂತಿಮ 5 ರಲ್ಲಿ ಸ್ಥಾನ ಪಡೆದಿತ್ತು. ಮುಖಪುಟ ವಿಭಾಗದಲ್ಲಿ ಎಂ ಎಸ್ ಸಾಗರ್ ಅವರ ವಿನ್ಯಾಸದ ‘ದುಪ್ಪಟ್ಟು’ ಹಾಗೂ ಕಿರಣ್ ಮಾಡಾಳು ವಿನ್ಯಾಸದ ‘ರಂಗ ಕೈರಳಿ’ ಇತ್ತು.Prestigious -National Level -Publishing Next Award - -Home Page-bahurupi

ಇಡೀ ಪುಸ್ತಕದ ವಿನ್ಯಾಸಕ್ಕಾಗಿ ನೀಡುವ ಪ್ರಶಸ್ತಿಗೆ ‘ದುಪ್ಪಟ್ಟು’ ನಾಮ ನಿರ್ದೇಶನಗೊಂಡಿತ್ತು. ದೇಶ, ವಿದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

Key words: Prestigious -National Level -Publishing Next Award – -Home Page-bahurupi