ಪತ್ರಿಕಾ ದಿನಾಚರಣೆ  ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ@mysore

Press Day felicitates senior journalists and contributes annual awards @Mysore

 

ಮೈಸೂರು,ಸೆಪ್ಟಂಬರ್.21,2024 (www.justkannada.in news):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ  ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಾಡಿದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಹಿರಿಯ ಪತ್ರಕರ್ತರನ್ನು ಅಭಿನಂದಿಸಿದರು. ವಾರ್ಷಿಕ ಪ್ರಶಸ್ತಿಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಢಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಪ್ರದಾನ ಮಾಡಿದರು.

ಅಭಿನಂದಿತರು ಮತ್ತು ಪ್ರಶಸ್ತಿ ವಿಜೇತರು :

ಈ ಸಾಲಿನ ಹಿರಿಯ ನಗರ ಪತ್ರಕರ್ತರಾಗಿ ದಿನತಂತಿ ಪತ್ರಿಕೆಯ ಹಿರಿಯ ವರದಿಗಾರ ಎಂ.ಎನ್. ಕಿರಣ್ ಕುಮಾರ್, ಗ್ರಾಮಾಂತರ ಹಿರಿಯ ಪತ್ರಕರ್ತ, ಪ್ರಜಾವಾಣಿ ದಿನಪತ್ರಿಕೆಯ ಯಶವಂತ ಸಾಲಿಗ್ರಾಮ,  ಹಿರಿಯ ಸುದ್ಧಿ ಸಂಪಾದಕ ಕೆ.ಎನ್. ನಾಗಸುಂದ್ರಪ್ಪ ( ವರ್ತಮಾನ ದಿನಪತ್ರಿಕೆ ),  ಹಿರಿಯ ಛಾಯಾಗ್ರಾಹಕರಾದ ಶ್ರೀರಾಮ್ (ದಿ. ಹಿಂದು ದಿನಪತ್ರಿಕೆ), ದೃಶ್ಯ ಮಾಧ್ಯಮದಿಂದ ಮಹೇಶ್ ಶ್ರವಣ ಬೆಳಗೋಳ (ಈ ಟಿವಿ ಭಾರತ್ ಹಿರಿಯ ವರದಿಗಾರ ) ದೃಶ್ಯ ಮಾಧ್ಯಮ ಹಿರಿಯ ವಿಡಿಯೋಗ್ರಫರ್ ನಾಗೇಶ್. ಎಸ್ (ವಿಸ್ತಾರ ಟಿವಿ ) ಅವರನ್ನು ಅಭಿನಂದಿಸಲಾಯಿತು.

ಈ ಸಾಲಿನ ಉತ್ತಮ ಕನ್ನಡ ವರದಿಗೆ ಹೆಚ್.ಎಸ್ ಸಚೀತ್ (ಪ್ರಜಾವಾಣಿ ಪತ್ರಿಕೆ) ಇಂಗ್ಲೀಷ್ ವರದಿಗೆ  ಶಿಲ್ಪಾ.ಪಿ (ಹಿರಿಯ ಪ್ರಧಾನ ವರದಿಗಾರ್ತಿ, ಡೆಕ್ಕನ್ ಹೆರಾಲ್ಡ್) ಉತ್ತಮ ಫೋಟೋಗ್ರ್ರಾಫಿಗೆ ಉದಯ್ ಶಂಕರ್.ಎಸ್ (ಇಂಡಿಯನ್ ಎಕ್ಸ್‌ ಪ್ರೆಸ್ಸ್ ಪತ್ರಿಕೆ) ವಿದ್ಯುನ್ಮಾನ ಮಾಧ್ಯಮದ ವರದಿ ಪ್ರಶಸ್ತಿಗಳಿಗೆ ಜಯಂತ್ ಮತ್ತು ರಾಮು‌ (ದೂರದರ್ಶನ) ಪ್ರಶಸ್ತಿ ಸ್ವೀಕರಿಸಿದರು.

key words: Press Day, felicitates, senior journalists, contributes, annual awards, @Mysore