ಮೈಸೂರು,ಸೆಪ್ಟಂಬರ್,13,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ-2025ರ ಅಂಗವಾಗಿ ಸೆಪ್ಟಂಬರ್ 20 ರಂದು ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಜಿ.ಟಿ ದೇವೇಗೌಡ ಅವರು ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡಲಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಅವರು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪಡೆದ ಮಾಡಲಿದ್ದಾರೆ.
ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡಿರುವ ಹಿರಿಯ ಪತ್ರಕರ್ತ ಡಾ.ಕೆ. ಶಿವಕುಮಾರ್ ಗೆ ಸಮಾರಂಭದಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಗುತ್ತದೆ. ನ್ಯೂಸ್ 18 ಕನ್ನಡ ಸಂಪಾದಕ ಎ.ಹರಿಪ್ರಸಾದ್ ಪ್ರಧಾನ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಗೌಡ ಕರ್ನಾಟಕ ಕಾರ್ಯಕನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಎಸ್ ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಕಾರ್ಯಕ್ರಮಕ್ಕೆ ಆಗಲಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾಹಿತಿ ನೀಡಿದ್ದಾರೆ.
ಅಭಿನಂದಿತರು..
ವರ್ಷದ ಹಿರಿಯ ವರದಿಗಾರ (ನಗರ)- ವಿ. ಮಹೇಶ್ ಕುಮಾರ್, ಪ್ರಧಾನ ಸಂಪಾದಕ, ಜಸ್ಟ್ ಕನ್ನಡ, ಮೈಸೂರು
ವರ್ಷದ ಹಿರಿಯ ವರದಿಗಾರ( ಗ್ರಾಮಾಂತರ) -ಸಾಧಿಕ್ ಪಾಷಾ ಟಿ.ಎ, ಆಂದೋಲನ ವರದಿಗಾರ
ವರ್ಷದ ಹಿರಿಯ ಉಪಸಂಪಾದಕರು –ಕೆಎಸ್ ಮಂಜುನಾಥಸ್ವಾಮಿ , ಉಪಸಂಪಾದಕ ವಿಜಯಕರ್ನಾಟಕ
ವರ್ಷದ ಹಿರಿಯ ಛಾಯಾಗ್ರಾಹಕ- ಎಸ್.ಉದಯ್ ಶಂಕರ್, ಛಾಯಾಗ್ರಾಹಕರು, ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್
ವರ್ಷದ ಹಿರಿಯ ಪತ್ರಕರ್ತರು – ಸಿಎಂ ಮಧುಸೂದನ್, ಸುವರ್ಣ ನ್ಯೂಸ್ ವರದಿಗಾರರು
ಅತ್ಯುತ್ತಮ ಜಿಲ್ಲಾ ವರದಿಗಾರ TNIT ಪ್ರಶಸ್ತಿ- ರವಿ ಪಾಂಡವಪುರ ವರದಿಗಾರ, ನ್ಯೂಸ್ ಫಸ್ಟ್
ಬೆಸ್ಟ್ ದಸರಾ ಕವರೇಜ್ TNIT ಪ್ರಶಸ್ತಿ- ರಾಮ್ ವರದಿಗಾರ ಟಿವಿ9
ಪ್ರಶಸ್ತಿ ಪುರಸ್ಕೃತರು
ವರ್ಷದ ಕನ್ನಡ ವರದಿ –ದಾ.ರಾ ಮಹೇಶ್ ವರದಿಗಾರ ( ಆಂದೋಲನ)
ವರ್ಷದ ಇಂಗ್ಲೀಷ್ ವರದಿ- ಎ.ಗಣೇಶ್ ವರದಿಗಾರ ಸ್ಟಾರ್ ಆಫ್ ಮೈಸೂರು
ವರ್ಷದ ಫೋಟೋಗ್ರಫಿ- ಎಸ್ ಆರ್ ಮಧುಸೂದನ್, ಛಾಯಾಗ್ರಾಹಕ ಟೈಫ್ಸ್ ಆಫ್ ಇಂಡಿಯಾ
Key words: Press Day, Mysore, Congratulation, senior journalists, annual award ceremony