ರಾಷ್ಟ್ರಪತಿ ಚುನಾವಣಾ ಫಲಿತಾಂಶ: ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮುನ್ನಡೆ.

ನವದೆಹಲಿ,ಜುಲೈ,21,2022(www.justkannada.in):  ಜುಲೈ 18 ರಂದು ನಡೆದ ರಾಷ್ಟ್ರಪತಿ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದ್ದು ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮುನ್ನಡೆ ಸಾಧಿಸಿದ್ದಾರೆ.

ಸಂಸದರ ಮತಗಳನ್ನು ಮೊದಲು ಎಣಿಕೆ ಮಾಡಲಾಗಿದ್ದು ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು 748 ಮತಗಳಲ್ಲಿ ದ್ರೌಪದಿ ಮುರ್ಮು 540 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 204 ಮತಗಳನ್ನು ಪಡೆದಿದ್ದರು.

ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ  1,47, 264 ಮೌಲ್ಯದ  ಮತಗಳನ್ನು ಪಡೆದಿದ್ದದ್ದರೇ ದ್ರೌಪದಿ ಮುರ್ಮು ಅವರು 3,83,232 ಮೌಲ್ಯದ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.

Key words: Presidential –election- result- NDA -candidate -Draupadi Murmu -leads