ರಾಷ್ಟ್ರಪತಿ ರಮನಾಥ್ ಕೋವಿಂದ್ ಭೇಟಿ ಹಿನ್ನೆಲೆ: ಪ್ರತಿಭಟನೆಯಿಂದ ಹಿಂದೆ ಸರಿಯಲು ರೈತಸಂಘ ನಿರ್ಧಾರ…

ಕೊಡಗು,ಫೆಬ್ರವರಿ,6,2021(www.justkannada.in): ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ತಲಕಾವೇರಿಗೆ ಇಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್  ಭೇಟಿ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ, ಜಿಲ್ಲೆಯ ರೈತರು ಪ್ರತಿಭಟನೆ ಮಾಡದಂತೆ ರೈತಸಂಘ ಮನವಿ‌ ಮನವಿ ಮಾಡಿದೆ.jk

ದೇಶದ ಪ್ರಥಮ ಪ್ರಜೆ ಮಡಿಕೇರಿಗೆ ಆಗಮಿಸುತ್ತಿದ್ದಾರೆ‌. ಹೀಗಾಗಿ ಗೌರವ ಸೂಚಕವಾಗಿ ಪ್ರತಿಭಟನೆಯಿಂದ ಹಿಂದೆ ಸರಿಯಲು ರೈತಸಂಘ ನಿರ್ಧಾರ ಮಾಡಿದೆ. ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತಮುಖಂಡರು ಇಂದು ರಾಷ್ಟ್ರೀಯ, ರಾಜ್ಯ ಹೆದ್ಧಾರಿ ತಡೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.President -Ramanath Kovind –visit-Farmers'- decision -withdraw - protest

ಈ ಹಿನ್ನೆಲೆಯಲ್ಲಿ  ಹುಣಸೂರು ಗೋಣಿಕೊಪ್ಪ ಮೂಲಕ ಕೇರಳ ತಲುಪುವ ಆನೆ ಚೌಕೂರು ರಾಜ್ಯ ಹೆದ್ದಾರಿ ತಡೆದು ರೈತಸಂಘ ಪ್ರತಿಭಟನೆಗೆ ಮುಂದಾಗಿತ್ತು. ಆದರೆ ಕೊಡಗು ಜಿಲ್ಲೆಗೆ ರಾಷ್ಟ್ರಪತಿ ಆಗಮನ ಹಿನ್ನಲೆ ಜಿಲ್ಲೆಯ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾಹಿತಿ‌ ನೀಡಿದ್ದಾರೆ.

Key words: President -Ramanath Kovind –visit-Farmers’- decision -withdraw – protest