ಟೆಸ್ಟ್ ಚಾಂಪಿಯನ್ ಆಗಲು ಸಿದ್ಧತೆ: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳು

ಬೆಂಗಳೂರು, ಜೂನ್ 15, 2021 (www.justkannada.in): ಆಂತರಿಕ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಮಿಂಚಿದ್ದಾರೆ.

ಶುಬ್ನಂ ಗಿಲ್, ರಿಷಬ್ ಪಂತ್, ಕೆಎಲ್ ರಾಹುಲ್, ವೃದ್ಧಿಮಾನ್ ಸಹಾ ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ನಲ್ಲಿ ಮಿಂಚಿದ್ದಾರೆ. ಈ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ಕದನ ಜೋರಾಗಿಯೇ ಇರುವ ಮುನ್ಸೂಚನೆ ಸಿಕ್ಕಿದೆ.

ಇಶಾಂತ್ ಶರ್ಮಾ ಕೂಡಾ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಭಾರತೀಯರು ಮಹತ್ವದ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಕೆಎಲ್ ರಾಹುಲ್, ವೃದ್ಧಿಮಾನ್ ಸಹಾ, ಶುಬ್ನಂ ಗಿಲ್ ಮೂವರೂ ಕ್ಲಿಕ್ ಆಗಿರುವುದು ಕೊಹ್ಲಿಗೆ ತಂಡದ ಆಯ್ಕೆ ವಿಚಾರದಲ್ಲಿ ತಲೆನೋವು ತರಲಿದೆ.