ಮೈಸೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವಪತ್ತೆ.

ಮೈಸೂರು,ಜೂನ್,14,2024 (www.justkannada.in): ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿಯ ಶವ ಪತ್ತೆಯಾಗಿರುವ ಘಟನೆ ಮೈಸೂರಿನ ಮಾನಸಿ ನಗರದ ಬಿಎಸ್ ಎನ್ ಎಲ್ ಲೇಔಟ್ ನಲ್ಲಿ ನಡೆದಿದೆ.

ಸೌಮ್ಯಶ್ರೀ (27) ಮೃತಪಟ್ಟವರು. ಕಳೆದ ಆರು ತಿಂಗಳ ಹಿಂದೆ ಮೈಸೂರಿನ ಮಂಜುನಾಥ್ ಎಂಬುವರ ಜೊತೆ ಸೌಮ್ಯ ಮದುವೆಯಾಗಿದ್ದರು.  ತಂದೆ ಶ್ರೀಧರ್ ತಮ್ಮ ಮಗಳು ಸೌಮ್ಯರನ್ನ ಬೆಂಗಳೂರಿನಿಂದ ಮೈಸೂರಿಗೆ ಮದುವೆ ಮಾಡಿಕೊಟ್ಟಿದ್ದರು.

ಈ ನಡುವೆ ಸೌಮ್ಯರ ನಡತೆ ಮೇಲೆ ಪತಿ ಮಂಜುನಾಥ್ ಅನುಮಾನ ಪಡುತ್ತಿದ್ದು ಹೀಗಾಗಿ ಮಂಜುನಾಥ್ ಹಾಗೂ ಮನೆಯವರೆಲ್ಲಾ ಸೇರಿ ಸೌಮ್ಯಳನ್ನ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಸ್ಥಳಕ್ಕೆ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Pregnant, women, death, Mysore