ಶ್ರೀಮುರಳಿ ‘ಮದಗಜ’ ಟೀಸರ್ ಲಾಂಚ್ ಮಾಡಲಿದ್ದಾರೆ ಪ್ರಶಾಂತ್ ನೀಲ್

ಬೆಂಗಳೂರು,ಡಿಸೆಂಬರ್,14,2020(www.justkannada.in): ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ.

ಟೀಸರ್ ಅನ್ನು ಕೆಜೆಎಫ್ ಖ್ಯಾತಿಯ ಪ್ರಶಾಂತ್ ನೀಲ್ ಲಾಂಚ್ ಮಾಡಲಿದ್ದಾರೆ. ಅಂದಹಾಗೆ ‘ಉಗ್ರಂ’ ಸಿನಿಮಾ ಮೂಲಕ ಶ್ರೀಮುರಳಿಗೆ ಬ್ರೇಕ್ ತಂದು ಕೊಟ್ಟಿದ್ದ ಪ್ರಶಾಂತ್.

ಕೆಜಿಎಫ್ ಬಳಿಕ ಪ್ರಶಾಂತ್-ಶ್ರೀಮುರಳಿ ಮತ್ತೆ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈವರೆಗೂ ಈ ಇಬ್ಬರಿಂದಲೂ ಈ ಕುರಿತು ಯಾವುದೇ ಸುದ್ದಿ ಹೊರ ಬಂದಿಲ್ಲ.

ಆದರೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ಟೀಸರ್ ನ್ನು ಪ್ರಶಾಂತ್ ನೀಲ್ ಲಾಂಚ್ ಮಾಡಲಿದ್ದಾರೆ.