ಮೈಸೂರು,ನವೆಂಬರ್,17,2025 (www.justkannada.in): ಕಡೇ ಕಾರ್ತಿಕ ಮಾಸದ ಪ್ರಯುಕ್ತ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಮೈಸೂರಿನ ಊಟಿ ರಸ್ತೆಯ ಚಿಕ್ಕಯ್ಯನ ಚಿತ್ರ ಗ್ರಾಮದ ಬಳಿ ಇರುವ ಇತಿಹಾಸ ಪ್ರಸಿದ್ಧಿ ಉಳ್ಳ ಹಳೆ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂದಂತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಗಳಾದ ತಾಂಡವಪು ಹಳ್ಳಿ ದಿಡ್ಡಿ, ಏಚಗಳ್ಳಿ, ಮರಳೂರು, ಬಸವನಪುರ, ಕೆಂಪಿ ಸಿದ್ದನ ಹುಂಡಿ, ಕಡಕೋಳ, ಬಿದರಗೋಡು, ಯಬ್ಯಾ ಹಡಕನಹಳ್ಳಿ ಹುಂಡಿ ಬಂಚಳ್ಳಿ ಹುಂಡಿ, ಚಿಕ್ಕಯ್ಯನ ಚಿತ್ರ ಗ್ರಾಮಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಬಳಿಕ ಬಂಚಳ್ಳಿ ಹುಂಡಿ ಚಿಕ್ಕಯನ ಛತ್ರ ಗ್ರಾಮಗಳಲ್ಲಿ ಶ್ರೀ ಪ್ರಸನ್ನ ಅಂಜನೇಶ್ವರ ಸ್ವಾಮಿಯ ರಥೋತ್ಸವ ಬಹಳ ವಿಜೃಂಭಣೆ ಜರಗಿತು. ಈ ಸಂದರ್ಭದಲ್ಲಿ ಮುಖ್ಯ ಅರ್ಚಕ ವೆಂಕಟೇಶ್ ದೇವಾಲಯದ ಆಡಳಿತ ಮಂಡಳಿಯವರು ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.
Key words: Prasanna Nanjundeshwara Rathostava, devotee, Mysore







