ವಿದೇಶಕ್ಕೆ ತೆರಳುತ್ತಿದ್ದ ಪ್ರಣಯ್ ರಾಯ್ ಮತ್ತು ರಾಧಿಕಾ ದಂಪತಿಯನ್ನು ಮುಂಬೈ ಏರ್ ಪೋರ್ಟ್ ನಲ್ಲೆ ತಡೆದ ಅಧಿಕಾರಿಗಳು

ಮುಂಬೈ:ಆ-10:(www.justkannada.in) ಬ್ಯಾಂಕ್ ವಂಚನೆ ಪ್ರಕರಣದ ಆರೋಪ ಹಿನ್ನಲೆಯಲ್ಲಿ ವಿದೇಶಕ್ಕೆ ಹೊರಟಿದ್ದ ಎನ್‌ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮತ್ತು ರಾಧಿಕಾ ದಂಪತಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಗಿದೆ.

ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ರಾಯ್ ದಂಪತಿ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಅವರನ್ನು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಭೂತ ಹಕ್ಕುಗಳನ್ನು ನಾಶಪಡಿಸುವುದರ ಭಾಗವಾಗಿ ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಾಣಾಯ್ ರಾಯ್ ಮತ್ತು ರಾಧಿಕಾ ಅವರನ್ನು ವಿದೇಶಕ್ಕೆ ಹೋಗದಂತೆ ತಡೆಯಲಾಗಿದೆ. ಈ ಇಬ್ಬರು ಪತ್ರಕರ್ತರು ಕೇವಲ ಒಂದು ವಾರದ ಮಟ್ಟಿಗೆ ವಿದೇಶ ಪ್ರಯಾಣ ಬೆಳೆಸುತ್ತಿದ್ದರು. ಒಂದು ವಾರದ ಬಳಿಕ ವಿದೇಶದಿಂದ ವಾಪಸ್ ಬರಲು ಟಿಕೆಟ್ ಸಹ ಬುಕ್ ಮಾಡಿದ್ದರು. ಆದರೆ, ಸುಳ್ಳು ಆರೋಪದ ಮೇಲೆ ಅವರ ವಿದೇಶ ಪ್ರವಾಸವನ್ನು ಮೊಟಕುಗೊಳಿಸಲಾಗಿದೆ.

ಇನ್ನು ಈ ಕ್ರಮ ಮಾಧ್ಯಮ ಸಂಸ್ಥೆಗಳ ಮಾಲೀಕರ ಮೇಲಿನ ದಾಳಿ ಎಂದು ಎನ್ ಡಿ ಟಿವಿ ಹೇಳಿಕೆಯನ್ನು ಕೂಡ ಬಿಡಿಗಡೆ ಮಾಡಿದೆ.

ವಿದೇಶಕ್ಕೆ ತೆರಳುತ್ತಿದ್ದ ಪ್ರಣಯ್ ರಾಯ್ ಮತ್ತು ರಾಧಿಕಾ ದಂಪತಿಯನ್ನು ಮುಂಬೈ ಏರ್ ಪೋರ್ಟ್ ನಲ್ಲೆ ತಡೆದ ಅಧಿಕಾರಿಗಳು

Prannoy Roy, wife Radhika stopped at Mumbai airport