ಹಳ್ಳಿ ಹಳ್ಳಿಗೂ ಪಿಎಫ್ ಐ ಕ್ಯಾನ್ಸರ್ ತಲುಪಿದೆ: ಸಂಘಟನೆ ಬಗ್ಗೆ ವಿಸ್ತಾರ ತನಿಖೆಯಾಗಲಿ- ಪ್ರಮೋದ್ ಮುತಾಲಿಕ್.

ಧಾರವಾಡ,ಸೆಪ್ಟಂಬರ್,27,2022(www.justkannada.in): ಎಸ್ ಡಿಪಿಐ ಮತ್ತು ಪಿಎಫ್ ಐ ದೇಶದ್ರೋಹಿ ಸಂಘಟನೆ. ಹಳ್ಳಿ ಹಳ್ಳಿಗೂ ಪಿಎಫ್ ಐ ಕ್ಯಾನ್ಸರ್ ತಲುಪಿದೆ. ಹೀಗಾಗಿ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆ ಬಗ್ಗೆ ವಿಸ್ತಾರ ತನಿಖೆಯಾಗಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಪಿಎಫ್ ಐ ಮುಖಂಡರ ಮೇಲೆ ಪೊಲೀಸರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಎಸ್.ಡಿಪಿಐ ಮತ್ತು ಪಿಎಫ್ ಐ  ಸಮಾಜ ಕಂಟಕ ಸಂಘಟನೆ. ಇಂಥ ಸಂದರ್ಭದಲ್ಲಿ 2ನೇ ಭಾರಿ ಪೊಲೀಸರು ದಾಳಿ ಮಾಡಿದ್ದಾರೆ.  ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳು ಆರ್ ಎಸ್ ಎಸ್ ಅನ್ನು ಟಾರ್ಗೆಟ್ ಮಾಡಿದ್ದವು.

ಕಾರಿನ ಮೇಲೆ ಜಿಹಾದಿ ಕೊಲೆ ಎಂದು ಬರೆದಿದ್ದರು.  ಇಂತಹ ವೇಳೆಯಲ್ಲಿ ಕೇಂದ್ರ ಸರ್ಕಾರದ ಕ್ರಮ ಅಭಿನಂದನಾರ್ಹ  ಸಂಘಟನೆಗಳ ಬಗ್ಗೆ ವಿಸ್ತಾರವಾಗಿ ತನಿಖೆಯಾಗಲಿ. ಪಿಎಫ್ ಐ ಮುಖಂಡರ ಮನೆ ಜಾಲಾಡಬೇಕು.  ಶಸ್ತ್ರಾಸ್ತ್ರಗಳು ಸಿಗುತ್ತೆ ಎಂದು ಆಗ್ರಹಿಸಿದರು.

Key words: Pramod muthalik-PFI-police-attack