ಹಿಂದೂ ಕಾರ್ಯಕರ್ತ ಸುಹಾಸ್ ಕೊಲೆ ಕೇಸ್: ಇದು ಪೂರ್ವ ನಿಯೋಜಿತ ಹತ್ಯೆ-ಪ್ರಮೋದ್ ಮುತಾಲಿಕ್ ಆಕ್ರೋಶ

ಮಂಗಳೂರು,ಮೇ,2,2025 (www.justkannada.in): ನಗರದ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಸುಹಾಸ್ ಶೆಟ್ಟಿ ಎಂಬ ಹಿಂದೂ ಕಾರ್ಯಕರ್ತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ನ ಫಾಜಿಲ್ ಎಂಬುವವರ ಕೊಲೆಯಾಗಿತ್ತು. ಇದೀಗ  ಇದಕ್ಕೆ ಪ್ರತಿಕಾರವಾಗಿ ಸುಹಾಸ್ ಶೆಟ್ಟಿಯನ್ನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್, ಇದು ಪೂರ್ವ ನಿಯೋಜಿತ ಹತ್ಯೆ. ಸರ್ಕಾರ ಈ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ.  ಪೊಲೀಸರು ಇವತ್ತಿನ ಸರ್ಕಾರ ಹೇಳಿದ ಪ್ರಕಾರ ನಡೆಯುತ್ತಾರೆ. ಸರ್ಕಾರ ಹೇಳಿದಂತೆ ಪೊಲೀಸರು ನಡೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Hindu activist, Suhas, murder case, Pramod Muthalik