Sunday, September 20, 2026

BDA Apartments

ಶಸ್ತ್ರ ಚಿಕಿತ್ಸೆ ಬಳಿಕ ಮತ್ತೆ ಶೂಟಿಂಗ್ ಗೆ ಮರಳಿದ ಪ್ರಕಾಶ್ ರೈ BDA JK_Adv BDA Adv
Home Cinema ಶಸ್ತ್ರ ಚಿಕಿತ್ಸೆ ಬಳಿಕ ಮತ್ತೆ ಶೂಟಿಂಗ್ ಗೆ ಮರಳಿದ ಪ್ರಕಾಶ್ ರೈ

ಶಸ್ತ್ರ ಚಿಕಿತ್ಸೆ ಬಳಿಕ ಮತ್ತೆ ಶೂಟಿಂಗ್ ಗೆ ಮರಳಿದ ಪ್ರಕಾಶ್ ರೈ

ಬೆಂಗಳೂರು, ಆಗಸ್ಟ್ 19, 2021 (www.justkannada.in): ನಟ ಪ್ರಕಾಶ್ ರೈ ಪೊನ್ನಿಯನ್ ಸೆಲ್ವಂ ಚಿತ್ರೀಕರಣಕ್ಕಾಗಿ ಅಸ್ಸಾಂ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಶೂಟಿಂಗ್ ಸೆಟ್ ನಲ್ಲಿ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರೈ ಚೇತರಿಸಿಕೊಂಡಿದ್ದು, ಮತ್ತೆ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಚೆನ್ನೈನಲ್ಲಿ ಧನುಷ್ ಸಿನಿಮಾ ಶೂಟಿಂಗ್ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದ ಪ್ರಕಾಶ್ ರಾಜ್, ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ವಿಷಯವನ್ನು ಪ್ರಕಾಶ್ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.