COURT NEWS: ಅತ್ಯಾಚಾರ ಪ್ರಕರಣ : ಆರೋಪಿ ಪ್ರಜ್ವಲ್‌ ರೇವಣ್ಣ ಜಾಮೀನಿಗೆ ತೀವ್ರ ಆಕ್ಷೇಪ.

The state government on Monday strongly opposed the bail of former MP Prajwal Revanna, a rape convict and scion of an influential political family, in the High Court. A division bench of Justices K.S. Mudgal and T. Venkatesh Nayak heard the criminal appeal filed by Prajwal Revanna seeking the quashing of his life sentence and granting him bail.

 

ಬೆಂಗಳೂರು, ನ.೨೪,೨೦೨೫ : ಅತ್ಯಾಚಾರ ಪ್ರಕರಣದ ಅಪರಾಧಿ , ಪ್ರಭಾವಿ ರಾಜಕೀಯ ಕುಟುಂಬದ ಕುಡಿ  ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ  ಜಾಮೀನಿಗೆ  ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್‌ನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತು.

ಆಜೀವ ಸೆರೆವಾಸ ಶಿಕ್ಷೆ ರದ್ದುಪಡಿಸಿ ಜಾಮೀನು ಮಂಜೂರಿಗೆ ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದಗಲ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ನಡೆಸಿತು.

ವಿಶೇಷ ತನಿಖಾ ದಳದ (ಎಸ್‌ಐಟಿ) ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್‌,  “ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬಗೊಳಿಸಲು ಪ್ರಜ್ವಲ್‌ 10-12 ಬಾರಿ ಪ್ರಯತ್ನ ಮಾಡಿದ್ದಾರೆ. ಪ್ರಜ್ವಲ್‌ ಕೋರಿಕೆಯ ಮೇರೆಗೆ ಹಲವು ವಿಚಾರಣೆ ಮುಂದೂಡಲ್ಪಟ್ಟಿದೆ. ಇದಕ್ಕೂ ಮುನ್ನ, ಕೃತ್ಯ ನಡೆಸಿ ದೇಶ ತೊರೆದು ತನಿಖೆಗೂ ಪ್ರಜ್ವಲ್‌ ಸವಾಲು ಎಸೆದಿದ್ದರು. ಸಂತ್ರಸ್ತೆಯರ ಜೊತೆಗಿನ ಲೈಂಗಿಕ ಕೃತ್ಯ ಸೆರೆ ಹಿಡಿದಿದ್ದ ಫೋನ್‌ ಅನ್ನು ಪ್ರಜ್ವಲ್‌ ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಜರ್ಮನಿಯಲ್ಲಿ ತನ್ನ ಫೋನ್‌ ಕಳೆದು ಹೋಗಿದೆ ಎಂದು ಪ್ರಜ್ವಲ್‌ ಹೇಳಿದ್ದಾರೆ. ಇದು ಈತನ ನಡತೆ” ಎಂದು ಜಾಮೀನಿಗೆ ಆಕ್ಷೇಪಿಸಿದರು.

“ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯನಾಗಿರುವ ಪ್ರಜ್ವಲ್‌ನ ಅಜ್ಜ ಮಾಜಿ ಪ್ರಧಾನಿ, ಆತನ ಚಿಕ್ಕಪ್ಪ ಹಾಲಿ ಕೇಂದ್ರ ಸಚಿವ  ಮತ್ತು ಮಾಜಿ ಮುಖ್ಯಮಂತ್ರಿ. ಆತನ ತಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಕೃತ್ಯದ ಮಾಹಿತಿ ನೀಡಲು ಬಂದ ಸಂತ್ರಸ್ತೆಗೆ ಅಂದಿನ ಜಿಲ್ಲಾಧಿಕಾರಿ ಸೇರಿ ಯಾರೂ ನೆರವು ನೀಡಿಲ್ಲ. ಬಲಾಢ್ಯರಾಗಿರುವುದರಿಂದಲೇ ಆಕೆಯ ಧ್ವನಿಯನ್ನು ಹತ್ತಿಕ್ಕಲಾಗಿತ್ತು”ಎಂದು ನ್ಯಾಯಾಲಯದಲ್ಲಿ ವಾದಿಸಿದರು.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜಾಮೀನು ನೀಡಿದರೆ, ಸಂತ್ರಸ್ತೆಯನ್ನು ಅಪಹರಿಸಿದ ಆರೋಪ  ಎದುರಿಸುತ್ತಿರುವ ಆತನ ತಂದೆ ಎಚ್‌ ಡಿ ರೇವಣ್ಣ ಮತ್ತು ತಾಯಿ ಭವಾನಿ ಅವರ ಜಾಮೀನು ಕೋರಿಕೆ ಮೇಲೆ ಆದೇಶ ಪ್ರಭಾವ ಬೀರುತ್ತದೆ. ಮಾತ್ರವಲ್ಲದೆ,  ಪ್ರಜ್ವಲ್‌ ಇದೇ ರೀತಿಯ ಕೃತ್ಯ ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ, ಆತ ಜಾಮೀನಿಗೆ ಅರ್ಹನಾಗಿಲ್ಲ” ಎಂದು ಪ್ರೊ.ರವಿವರ್ಮ ಕುಮಾರ್‌ ಆಕ್ಷೇಪಿಸಿದರು.

ಅತ್ಯಂತ ಘನಘೋರ ಮತ್ತು ಹೀನ ಕೃತ್ಯ ಎಸಗಿರುವ ಪ್ರಜ್ವಲ್‌ಗೆ ಜಾಮೀನು ಮಂಜೂರು ಮಾಡಿ, ಆತ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟರೆ ಸಮಾಜಕ್ಕೆ ಯಾವ ಸಂದೇಶ ರವಾನೆಯಾಗಲಿದೆ? ಜಾಮೀನು ನೀಡುವುದು ನಿಯಮ, ವಿಶೇಷ ಸಂದರ್ಭದಲ್ಲಿ ಜೈಲು ಶಿಕ್ಷೆ ವಿಧಿಸಬೇಕು ಎಂಬ ನಿಯಮ ಇರುವುದು ಸತ್ಯ. ಆದರೆ, ಈ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನಿಗೆ ಖಂಡಿತವಾಗಿಯೂ ಅರ್ಹನಾಗಿಲ್ಲ. ಈ ಹಂತದಲ್ಲಿ ವಿಚಾರಣಾಧೀನ ನ್ಯಾಯಾಲಯದ ತೀರ್ಪಿನಲ್ಲಿ ದೋಷ ಹುಡುಕಬಾರದು ಎಂದರು.

ಸರ್ಕಾರದ ಆಕ್ಷೇಪಣೆ ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿತು.

key words: Rape case, Strong objection, to bail, for accused, Prajwal Revanna.

SUMMARY:

Rape case: Strong objection to bail for accused Prajwal Revanna.

The state government on Monday strongly opposed the bail of former MP Prajwal Revanna, a rape convict and scion of an influential political family, in the High Court. A division bench of Justices K.S. Mudgal and T. Venkatesh Nayak heard the criminal appeal filed by Prajwal Revanna seeking the quashing of his life sentence and granting him bail.