ಪ್ರಜ್ವಲ್ ಬಗ್ಗೆ ಗೊತ್ತಿಲ್ಲ: ರೇವಣ್ಣ ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದಾರೆ- ಶಾಸಕ ಜಿ.ಟಿ ದೇವೇಗೌಡ.

ಬೆಂಗಳೂರು,ಮೇ,15,2024 (www.justkannada.in):  ಪ್ರಜ್ವಲ್ ಎಲ್ಲಿದ್ದಾರೆ? ಯಾವಾಗ ಬರುತ್ತಾರೆ? ಎಂದು ಯಾರಿಗೂ ಗೊತ್ತಿಲ್ಲ. ಪ್ರಜ್ವಲ್ ಮನೆಯವರಿಗೂ ಗೊತ್ತಿಲ್ಲ.  ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದಾರೆ ಎಂದು  ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ.  ಪ್ರಜ್ವಲ್ ಎಲ್ಲಿದ್ದಾರೆ? ಯಾವಾಗ ಬರುತ್ತಾರೆ? ಎಂದು ಯಾರಿಗೂ ಗೊತ್ತಿಲ್ಲ. ಪ್ರಜ್ವಲ್ ವಿದೇಶಕ್ಕೆ ಯಾಕೆ ಹೋದರು ಯಾವಾಗ ಬರುತ್ತಾರೆ ಯಾವಾಗ ಬರುವುದಿಲ್ಲ ಇದು ಯಾವುದರ ಕುರಿತು ನಮಗೆ ಸುಳಿವು ಇಲ್ಲ. ಅವರ ಕುಟುಂಬಕ್ಕೆ ಗೊತ್ತಿಲ್ಲದ ಮೇಲೆ ನಮಗೆ ಹೇಗೆ ಗೊತ್ತಿರುತ್ತದೆ ಎಂದು ಪ್ರಶ್ನಿಸಿದರು.

ರೇವಣ್ಣ ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದಾರೆ. ಇಡೀ ರಾಜ್ಯದ ಜನತೆಗೆ ಸತ್ಯ ಗೊತ್ತಿದೆ.  ಸಿಎಂ ಡಿಸಿಎಂಗೂ ಸತ್ಯ ಗೊತ್ತಿದೆ ಸತ್ಯ ಗೊತ್ತಿದ್ರೂ ಬಂಧಿಸಿದ್ರಲ್ಲ ಎಂದು ಜಿಟಿ ದೇವೇಗೌಡರು ತಿಳಿಸಿದರು.

Key words: Prajwal, case , HD Revanna, GT Deve Gowda