ಕೋವಿಡ್ ಆತಂಕ ಕಡಿಮೆಯಾದ ಬಳಿಕ ಬಹುಕೋಟಿ ವೆಚ್ಚದ ಚಿತ್ರದ ರಿಲೀಸ್ ಪ್ರಭಾಸ್ ರೆಡಿ !

ಬೆಂಗಳೂರು, ಅಕ್ಟೋಬರ್ 16, 2020 (www.justkannada.in): 400 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಪ್ರಭಾಸ್ ಅವರ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ವಿಎಫ್‌ಎಕ್ಸ್ ವಿನ್ಯಾಸವೂ ಬಿಡುಗಡೆಯಾಗಿದೆ.

ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ಖಳ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಮೂಲಕ ನಿರ್ಮಾಪಕ ಓಂ ರೌತ್ ತಮ್ಮ ಮುಂದಿನ ಚಲನಚಿತ್ರವನ್ನು ಘೋಷಿಸಿದ್ದು ಈಗಾಗಲೇ ಆದಿಪುರುಶ್ ಎಂದು ಹೆಸರಿಡಲಾಗಿದೆ.

ದೇಶದಲ್ಲಿ ಎಲ್ಲಾ ಚಿತ್ರಮಂದಿರಗಳೂ ತೆರೆದ ನಂತರ ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಬಿಡುಗಡೆ ಅತಿದೊಡ್ಡ ಮಟ್ಟದಲ್ಲಿ ಇರಲಿದೆ. ಕೋವಿಡ್ -19 ರ ನಂತರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಅತಿದೊಡ್ಡ ಭಾರತೀಯ ಚಿತ್ರ ಇದಾಗಲಿದೆ ಎನ್ನಲಾಗುತ್ತಿದೆ.

ದೇಶದಲ್ಲಿ ಎಲ್ಲಾ ಚಿತ್ರಮಂದಿರಗಳೂ ತೆರೆದ ನಂತರ ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಬಿಡುಗಡೆ ಅತಿದೊಡ್ಡ ಮಟ್ಟದಲ್ಲಿ ಇರಲಿದೆ. ಕೋವಿಡ್ -19 ರ ನಂತರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಅತಿದೊಡ್ಡ ಭಾರತೀಯ ಚಿತ್ರ ಇದಾಗಲಿದೆ ಎಂದು ಚಿತ್ರದ ನಿರ್ಮಾಪಕರು ಸುಳಿವು ಬಿಟ್ಟುಕೊಟ್ಟಿದ್ದಾರೆ.