ತಮಿಳುನಾಡು :  ಸಿಎಂ  ಸ್ಟ್ಯಾಲಿನ್‌ ಪೋಸ್ಟರ್‌ ತಂದ ಎಡವಟ್ಟು..!

Poster declares - MK Stalin -  ‘Bride of Tamil Nadu’-  netizens ask -'who's the groom?'

 

ಚೆನ್ನೈ, ಮಾ.೦೬, ೨೦೨೪ : ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾವಚಿತ್ರದ ಪೋಸ್ಟರ್ ವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ.

ಈ ಪೋಸ್ಟರ್‌ನಲ್ಲಿ ಎಂಕೆ ಸ್ಟಾಲಿನ್ ಅವರ ಚಿತ್ರವಿದೆ, ಅದರ ಮೇಲೆ ‘ತಮಿಳುನಾಡಿನ ವಧು’ (bride of tamilnadu ) ಎಂದು ಬರೆಯಲಾಗಿದೆ.

ಮೂಲಗಳ ಪ್ರಕಾರ, ಪೋಸ್ಟರ್ ಅನ್ನು ‘ಪ್ರೈಡ್ ಆಫ್ ತಮಿಳುನಾಡು’ ಅಂದ್ರೆ ʼ ತಮಿಳು ನಾಡಿನ ಹೆಮ್ಮೆ ʼ ಎಂದು ಮುದ್ರಿಸಲು ಯೋಜಿಸಲಾಗಿದೆ. ಆದರೆ ಮುದ್ರ ರಾಕ್ಷಸನ ಪರಿಣಾಮ, ಕಾಗುಣಿತ ದೋಷದಿಂದ ಪ್ರೈಡ್‌ ಬದಲಾಗಿ ಬ್ರೈಡ್‌ ಎಂದು ಪ್ರಿಂಟ್‌ ಮಾಡಲಾಗಿದೆ. ಇದರಿಂದ ಪೋಸ್ಟರ್‌ ನ ಭಾವಾರ್ಥ ಎಡವಟ್ಟಾಗಿದೆ.

ಇದರ ಫಲಿತಾಂಶವು ಸಾಕಷ್ಟು ಸ್ವಾರಸ್ಯಗಳಿಗೆ ಕಾರಣವಾಗಿದೆ. ಪೋಸ್ಟರ್ ಹಾಕಿದ್ದು ಯಾರು, ಎಲ್ಲಿ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

“ತಮಿಳುನಾಡಿನ ವಧು,” X ನಲ್ಲಿ ಹಂಚಿಕೊಂಡಿರುವ ಚಿತ್ರಕ್ಕೆ ಹಲವಾರು ಮಂದಿ ಹಲವು ಬಗೆಯ ಕಮೆಂಟ್ಸ್‌ ಹಂಚಿದ್ದಾರೆ.

ಕೃಪೆ :  ಹಿಂದೂಸ್ತಾನ್‌ ಟೈಮ್ಸ್‌

Key words :  Poster declares – MK Stalin –  ‘Bride of Tamil Nadu’-  netizens ask -‘who’s the groom?’